ಜೂನ್​, ಜುಲೈ ನಲ್ಲಿ ಕೈಕೊಟ್ಟ ವರುಣ! ಸಿಡಿಲು ಬರಿಸುತ್ತೆ ಮಳೆ ಲೆಕ್ಕಾಚಾರ! ಇನ್ನೈದು ದಿನ ಹೊಸ ವಾರ್ನಿಂಗ್!

ಹಂಚಿಕೊಳ್ಳಿ
WhatsApp Facebook X Telegram
Shivamogga Monsoon Report Karnataka Rain Report Shivamogga Records 81mm Rain,
Shivamogga Monsoon Report

Shivamogga under an Orange alert / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೈರುತ್ಯ ಮುಂಗಾರು ಈ ಬಾರಿ ಮಲೆನಾಡಲ್ಲೇ ಕೈಕೊಟ್ಟಿದೆ. ಇವತ್ತು ಕೂಡ ಹವಾಮಾನ ಮುನ್ಸೂಚನೆಯಲ್ಲಿ ಮಲೆನಾಡ ಕೆಲವೆಡೆ ಮಾತ್ರ ಮಳೆಯಾಗಲಿದೆ ಎಂದು ಹೇಳಲಾಗಿದೆ. ಇನ್ನೂ ಅಂಕಿ ಅಂಶಗಳ ಲೆಕ್ಕಾ ತೆಗೆದುಕೊಂಡರೆ, ಈ ಸಲ ಅರ್ಧಕರ್ಧ ಮಳೆ ಕಡಿಮೆ.

ಹವಾಮಾನ ಇಲಾಖೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2026ರ ಜುಲೈ 28ರ ವರೆಗೆ ಆಗಬೇಕಿದ್ದ ವಾಡಿಕೆ ಮಳೆಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಬರೋಬ್ಬರಿ ಶೇಕಡಾ 43ರಷ್ಟು ಮಳೆ ಕೊರತೆ (Deficit) ಉಂಟಾಗಿದೆ.

  • ಶಿವಮೊಗ್ಗ ಜಿಲ್ಲೆಯ ಜೂನ್ ಮತ್ತು ಜುಲೈ ತಿಂಗಳ ಮಳೆಯ ಪ್ಯಾಟ್ರನ್ನೇ ಬದಲಾಗಿದೆ. ಅಂದರೆ ದೋ ಎಂದು ಸುರಿಯುತ್ತಿದ್ದ ಮಳೆ ಮಾಯವಾದಂತಿದೆ. ವಾಡಿಕೆಯಂತೆ ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ 472 ಮಿ.ಮೀ ಮಳೆಯಾಗಬೇಕಿತ್ತು, ಆದರೆ ಈ ವರ್ಷ ಕೇವಲ 194 ಮಿ.ಮೀ ವರ್ಷಧಾರೆಯಾಗಿದೆ. ಅಂದರೆ ಶೇ. 59ರಷ್ಟು ಕೊರತೆ ಎದುರಾಗಿದೆ.
  • ಇನ್ನು ಜುಲೈ ತಿಂಗಳ (1ರಿಂದ 28ರವರೆಗೆ) ಅಂಕಿ-ಅಂಶಗಳನ್ನು ಗಮನಿಸಿದರೆ, ವಾಡಿಕೆ ಮಳೆ 694 ಮಿ.ಮೀ ಇರಬೇಕಿತ್ತು, ಆದರೆ ಸುರಿದಿರುವುದು 467 ಮಿ.ಮೀ ಮಳೆ. ಜುಲೈನಲ್ಲಿ ಮಳೆಯ ಕೊಂಚ ಚೇತರಿಸಿಕೊಂಡಿದ್ದರೂ, ವಾಡಿಕೆಗಿಂತ ಶೇ. 33ರಷ್ಟು ಕಡಿಮೆ ಇದೆ
  • ಒಟ್ಟಾರೆಯಾಗಿ ಜೂನ್ 1ರಿಂದ ಜುಲೈ 28ರವರೆಗೆ 1166 ಮಿ.ಮೀ ಮಳೆ ಆಗಬೇಕಿತ್ತು. ಆದರೆ ವಾಸ್ತವದಲ್ಲಿ 661 ಮಿ.ಮೀ ಮಾತ್ರ ಮಳೆಯಾಗಿದೆ.

ಸತತ 4 ದಿನ ಆರೆಂಜ್ ಅಲರ್ಟ್

ಮತ್ತೊಂದೆಡೆ ಹವಾಮಾನ ಇಲಾಖೆ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. Karnataka State Natural Disaster Monitoring Centre (KSNDMC) ನೀಡಿರುವ ನಕ್ಷೆಗಳ ಪ್ರಕಾರ, ಜುಲೈ 29 ರಿಂದ ಆಗಸ್ಟ್ 01 ವರೆಗೆ ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಾಗೂ ಬಿರುಗಾಳಿ ಸಹಿತ ಗುಡುಗು-ಮಿಂಚು ಇರುವ ಸಾಧ್ಯತೆಗಳಿವೆ. ಆದರೆ ಜಿಲ್ಲೆಯಾದ್ಯಂತವೂ ಮಳೆ ವ್ಯಾಪಕವಾಗಿರಲಿದೆ ಎಂದು ಸೂಚಿಸಿಲ್ಲ. ಆಗಸ್ಟ್ 1, 2ರ ಅವಧಿಯಲ್ಲಿ ಮಳೆ ಕೊಂಚ ತಗ್ಗಲಿದ್ದು, ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಟ್’ (Watch – Be Prepared) ನೀಡಲಾಗಿದೆ.

ಇನ್ನೂ ಶಿವಮೊಗ್ಗದ ಜೊತೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೂ ಮೊದಲ ನಾಲ್ಕು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸದ್ಯಕ್ಕೆ ಹವಾಮಾನ ಇಲಾಖೆ ನೀಡಿರುವ ಆರೆಂಜ್ ಅಲರ್ಟ್ ಅವಧಿಯಲ್ಲಿ ನಿರೀಕ್ಷಿತ ಮಟ್ಟದ ಭಾರಿ ಮಳೆಯಾದರೆ ಮಾತ್ರ ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ಮಳೆ ಕೊರತೆಯ ಅಂತರ ಕೊಂಚ ತಗ್ಗಲಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor