ಉಚಿತ ಹೋಟೆಲ್ ಮ್ಯಾನೇಜ್‌ಮೆಂಟ್ ಡಿಗ್ರಿ, ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ! ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
Shivamogga 112 Police Shivamogga Hit-and-Run Unidentified Man Dies Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga
Shivamogga 112 Police Shivamogga Hit-Shivamogga Hit-and-Run Unidentified Man Dies and-Run Unidentified Man Dies Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga

Free hotel management course / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಾದ್ಯಂತ ಇರುವ ಅರ್ಹ 3,000 ವಿದ್ಯಾರ್ಥಿಗಳಿಗೆ ಆರ್ಯ ಚಾರಿಟಬಲ್ ಟ್ರಸ್ಟ್ ಹಾಗೂ ಮೇಧಾವಿ ಸ್ಕಿಲ್ಸ್ ಯೂನಿವರ್ಸಿಟಿ ಸಹಯೋಗದೊಂದಿಗೆ ಸಂಪೂರ್ಣ ಉಚಿತ ಹೋಟೆಲ್ ಮ್ಯಾನೇಜ್‌ಮೆಂಟ್ ಡಿಗ್ರಿ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಕರೆಯಲಾಗಿದೆ‌.

ಈ ಯೋಜನೆಯಡಿ 10+2 ವಿದ್ಯಾರ್ಹತೆ ಹೊಂದಿರುವ 18 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು 3 ವರ್ಷದ ಬಿ.ಎಸ್ಸಿ (ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಹಾಸ್ಪಿಟಾಲಿಟಿ) ಅಥವಾ 12 ತಿಂಗಳ ಡಿಪ್ಲೊಮಾ (ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಹಾಸ್ಪಿಟಾಲಿಟಿ) ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ 10ನೇ ತರಗತಿ ಉತ್ತೀರ್ಣರಾಗಿರುವ 18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳಿಗೆ 2 ವರ್ಷದ ‘ಡಿಪ್ಲೊಮಾ ಇನ್ ವೊಕೇಷನಲ್ ಟ್ರೈನಿಂಗ್’ ಕೋರ್ಸ್ ಲಭ್ಯವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸ್ ಮುಗಿಯುವವರೆಗೆ ಉಚಿತ ವಸತಿ, ಊಟದ ಜೊತೆಗೆ ಪ್ರತಿ ತಿಂಗಳು ರೂ. 6,000 ಶಿಷ್ಯವೇತನ (ಸ್ಟೈಫಂಡ್) ನೀಡಲಾಗುತ್ತದೆ. ನೋಂದಣಿಗೆ ಕೊನೆಯ ದಿನಾಂಕ ಆಗಸ್ಟ್ 15 ಆಗಿದ್ದು, ತರಗತಿಗಳು ಸೆಪ್ಟೆಂಬ‌ರ್ 1 ರಿಂದ ಪ್ರಾರಂಭವಾಗಲಿವೆ.

ಆಸಕ್ತರು [email protected] ಅಥವಾ 6362285608, 9480218240 ಸಂಖ್ಯೆಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ಕರ್ನಾಟಕದ ಆರ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವರುಣ್ ಜಿ.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor