ನಿಮಗೆ ಗೊತ್ತಿಲ್ಲದೇ, ನಿಮ್ಮದೆ ಅಕೌಂಟ್​ ಮೂಲಕ ಬೇರೆಯವರು ಲೋನ್​ ಮಾಡಿರಬಹುದು! ಹೀಗೂ ನಡೆಯುತ್ತೆ ಫ್ರಾಡ್!

Published: 28 ಜುಲೈ 2026, 8:51 ಫೂರ್ವಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Without Taking Loan / ಮಲೆನಾಡು ಟುಡೆ ಸುದ್ದಿ / ಜಗಳೂರು / ಸಾಲವೇ ಬೇಡ, ಬಡ್ಡಿ ಕಟ್ಟೋದು ಯಾರು! ಅಷ್ಟೆಲ್ಲಾ ರಿಸ್ಕ್​ ಯಾಕೆ ಅಂದ್ಕೊಳ್ಳೋರ ಅಕೌಂಟ್​ನಲ್ಲಿ ಯಾರೋ ಗೊತ್ತಿಲ್ಲದೇ ಲೋನ್​ ತಗೊಂಡಿದ್ದರೇ ಆತನ ಪರಿಸ್ಥಿತಿ ಹೇಗಾಗಬೇಡ..ಸದ್ಯ ಅಂತಹ ಸನ್ನಿವೇಶವೂ ಎದುರಾಗುತ್ತಿದೆ. ಆ ಕಾರಣಕ್ಕೆ ಈ ಜಾಗೃತಿಯ ಸುದ್ದಿ ಓದಿ! ಜಗಳೂರು ಪಟ್ಟಣದ ಅಚ್ಯುತ ಬಡಾವಣೆಯಲ್ಲಿ…

Without Taking Loan / ಮಲೆನಾಡು ಟುಡೆ ಸುದ್ದಿ / ಜಗಳೂರು / ಸಾಲವೇ ಬೇಡ, ಬಡ್ಡಿ ಕಟ್ಟೋದು ಯಾರು! ಅಷ್ಟೆಲ್ಲಾ ರಿಸ್ಕ್​ ಯಾಕೆ ಅಂದ್ಕೊಳ್ಳೋರ ಅಕೌಂಟ್​ನಲ್ಲಿ ಯಾರೋ ಗೊತ್ತಿಲ್ಲದೇ ಲೋನ್​ ತಗೊಂಡಿದ್ದರೇ ಆತನ ಪರಿಸ್ಥಿತಿ ಹೇಗಾಗಬೇಡ..ಸದ್ಯ ಅಂತಹ ಸನ್ನಿವೇಶವೂ ಎದುರಾಗುತ್ತಿದೆ. ಆ ಕಾರಣಕ್ಕೆ ಈ ಜಾಗೃತಿಯ ಸುದ್ದಿ ಓದಿ!

ಜಗಳೂರು ಪಟ್ಟಣದ ಅಚ್ಯುತ ಬಡಾವಣೆಯಲ್ಲಿ ಜೆರಾಕ್ಸ್ ಅಂಗಡಿ ನಡೆಸುವ ಸುರೇಶಯ್ಯ ಎಂಬವರು ಈ ಥರದ ವಂಚನೆಗೊಳಗಾಗಿರುವ ಪ್ರಕರಣ ಕಳೆದ ಶುಕ್ರ ವಾರ ಬೆಳಕಿಗೆ ಬಂದಿದೆ. ಸ್ಕೂಲ್ ಫೀಜ್ ಕಟ್ಟಲು ಸಾಲ ತೆಗೆಯಲು ಹೋಗಿದ್ದ ಸುರೇಶಯ್ಯರಿಗೆ ತಮ್ಮ ಹೆಸರಿನಲ್ಲಿ ಕಾರು ಲೋನ್ ಇರುವುದು ನೋಡಿ ಅಚ್ಚರಿಯಾಗಿದೆ. ಅಲ್ಲದೆ, ಖುದ್ದು ಮಾಡದ ಸಾಲಕ್ಕೆ ಹೊಣೆಯಾಗುವ ಆತಂಕ ಮೂಡಿದೆ.ಈ ಸಂಬಂದ ಪೊಲೀಸರಿಗೆ ಕಂಪ್ಲೆಂಟ ನೀಡಿದ್ದಾರೆ.

ಮಗನ ಶಾಲಾ ಶುಲ್ಕ ಪಾವತಿಸಲು ಹಣವಿಲ್ಲದೆ ಸುರೇಶಯ್ಯ ಸಾಲ ಮಾಡ್ಬೇಕು ಅಂದ್ಕೊಂಡಿದ್ದರು. ಅದಕ್ಕಾಗಿ ಪರಿಚಿತ ಫೈನಾನ್ಸ್‌ ಸಿಬ್ಬಂದಿ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ಆಗ ಆ ವ್ಯಕ್ತಿ ಸುರೇಶಯ್ಯರ ಸಿಬಿಲ್ ಸ್ಕೋರ್​ ಪರಿಶೀಲಿಸಿದ್ದಾರೆ. ಈ ವೇಳೆ ಶಾಕ್ ಕಾದಿತ್ತು. ಏಕೆಂದರೆ ಸಿಬಿಲ್​ ಸ್ಕೋರ್​ನಲ್ಲಿ ಕಾರ್​ ಲೋನ್​ ಬ್ಲಿಂಕ್ ಆಗಿದೆ. ಸುರೇಶಯ್ಯರ ಹೆಸರಿಗೆ ವೆಹಿಕಲ್ ಲೋನ್​ ಮಂಜೂರಾಗಿದ್ದರ ಬಗ್ಗೆ ಉಲ್ಲೇಖವಾಗಿದೆ.

2026ರ ಜೂ.5ರಂದು ಸುರೇಶ್ ಹೆಸರಿನಲ್ಲಿ ₹8.40 ಲಕ್ಷ ಕಮರ್ಷಿಯಲ್ ವೆಹಿಕಲ್ ಲೋನ್ ಮಂಜೂರಾಗಿದೆ ಅಂತಾ ಆನ್​ಲೈನ್​ನಲ್ಲಿ ತೋರಿಸ್ತಿರುವುದನ್ನ ನೋಡಿ ಗಾಬರಿಯಾದ ಸುರೇಶಯ್ಯ ಸಂಬಂಧಿಸಿದ ಫೈನಾನ್ಸ್ ಕಚೇರಿಗೆ ಹೋಗಿ ವಿಚಾರಿಸಿದ್ದಾರೆ. ಆದರೆ ಅಲ್ಲಿ ಇನ್ನೊಂದು ಆಘಾತ ಎದುರಾಗಿತ್ತು.

ಫೈನಾನ್ಸ್​ನವರು ನಾವು ನಿಮಗೆ ಸಾಲವನ್ನೇ ಕೊಟ್ಟಿಲ್ಲ, ಅದು ಹೇಗೆ ವೆಹಿಕಲ್​ ಲೋನ್​ ಇರಲು ಸಾಧ್ಯ…? ಎಂದು ಮರುಪ್ರಶ್ನೆ ಹಾಕಿದ್ದಾರೆ. ಪರಿಣಾಮ ಇನ್ನಷ್ಟು ಆತಂಕಗೊಂಡ ಸಂತ್ರಸ್ತ ಸುರೇಶಯ್ಯ ಪೊಲೀಸರ ನೆರವು ಕೋರಿ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ.

END OF STORY

ajjimane ganesh

Senior Journalist | Malenadu Today
✓ Verified Journalist