ಬಸವನಗುಡಿ, ತುಂಗಾನಗರ, ರೈಲ್ವೆ ಸ್ಟೇಷನ್​! ಇವತ್ತು, ನಾಳೆ 30 ಕ್ಕೂ ಹೆಚ್ಚು ಏರಿಯಾಗಳಲ್ಲಿ ಪವರ್ ಕಟ್​

ಹಂಚಿಕೊಳ್ಳಿ
WhatsApp Facebook X Telegram
ವಿದ್ಯುತ್ ವ್ಯತ್ಯಯ
power outage ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

power cut in shivamogga city | ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ |ನಗರಕ್ಕೆ ಸಂಬಂಧಿಸಿದಂಥೆ ಮೆಸ್ಕಾಂ ಶಿವಮೊಗ್ಗ ಮೂರು ಮುಖ್ಯ ಪ್ರಕಟಣೆಗಳನ್ನ ನೀಡಿದ್ದು ಇವತ್ತು ಮತ್ತು ನಾಳ ಎಲ್ಲೆಲ್ಲಿ ಕರೆಂಟ್ ಇರಲ್ಲ ಎಂಬುದರ ಬಗ್ಗೆ ಮಾಹಿತಿ ನೀಡಿದೆ. ವಾರ್ತಾ ಇಲಾಖೆ ಮೂಲಕ ಮೆಸ್ಕಾಂ ಶಿವಮೊಗ್ಗ ನೀಡಿರುವ ಪ್ರಕಟಣೆಯ ಯಥಾವತ್ತು ವಿವರಣೆ ಹೀಗಿದೆ.

ಜು. 04 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಇವತ್ತು ಅಂದರೆ ಜು.04 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಜಯನಗರ ಮುಖ್ಯರಸ್ತೆ, ಮೆಟ್ರೋ ಆಸ್ಪತ್ರೆ ರಸ್ತೆ, ನೆಹರೂ ಕ್ರೀಡಾಂಗಣ ರಸ್ತೆ, ಸರ್ವೋದಯ ಶಾಲೆ ರಸ್ತೆ, ಬಸವನಗುಡಿ, ಶಿವಮೂರ್ತಿ ಸರ್ಕಲ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಜುಲೈ 5 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರದ ಕೆ.ಇ.ಬಿ ವೃತ್ತದ ಹತ್ತಿರ ‘ಸ್ಪಿನ್ ಪೋಲ್ ಶಿಫ್ಟಿಂಗ್’ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 5 ರ ಭಾನುವಾರದಂದು ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕೆ.ಇ.ಬಿ ಸರ್ಕಲ್, ಬಾಪೂಜಿ ನಗರ, ರೈಲ್ವೆ ಸ್ಟೇಷನ್ ರಸ್ತೆ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸಬೇಕಾಗಿ ಶಿವಮೊಗ್ಗ ನಗರ ಉಪ ವಿಭಾಗ-1ರ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ

ಜು. 05 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-2, ಘಟಕ-6ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಜು.05 ರಂದು ಬೆಳಗ್ಗೆ 09 ರಿಂದ ಸಂಜೆ 4 ರವರೆಗೆ ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಚಾಲುಕ್ಯನಗರ, ಮಂಜಪ್ಪ ಬಸಪ್ಪ ಲೇಔಟ್, ಗದ್ದೆಮನೆ ಲೇಔಟ್, ಭರತ್ ಎಂಟರ್‌ಪ್ರೈಸಸ್, ಆಶ್ರಯ ಬಡಾವಣೆ, ಆನಂದಗಿರಿ ಬಡಾವಣೆ, ಮಲ್ಲಿಕಾರ್ಜುನ ಬಡಾವಣೆ, ವಿನಾಯಕ ಸರ್ಕಲ್, ಜಿ.ಎಸ್. ಕಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, 100 ಅಡಿ ರಸ್ತೆ, ಕಾಮತ್ ಲೇಔಟ್, ಮೇಲಿನ ತುಂಗಾನಗರ, ಇಲಿಯಾಜ್ ನಗರ ಚಾನಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor