Love makes monsters of women: ಟಾಕ್ಸಿಕ್ ಟೀಸರ್ ರಿಲೀಸ್​​! ಹೇಗಿದೆ?

ಹಂಚಿಕೊಳ್ಳಿ
WhatsApp Facebook X Telegram
Rocking Star Yash s High-Octane Toxic Teaser Out
Rocking Star Yash s High-Octane Toxic Teaser Out

Rocking Star Yash ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಾಣ ಮಾಡುತ್ತಿರುವ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಅಧಿಕೃತ ಟೀಸರ್ ಇಂದು ಬಿಡುಗಡೆಯಾಗಿದೆ. ಮುಖ್ಯವಾಗಿ ಚಿತ್ರದ ಮಹಿಳಾ ಪಾತ್ರಧಾರಿಗಳನ್ನು ಪರಿಚಯಿಸುವ ರೀತಿಯಲ್ಲಿ ಮೂಡಿಬಂದಿರುವ ಈ ಟೀಸರ್, ಪವರ್‌ಫುಲ್ ಡೈಲಾಗ್‌ಗಳು ಮತ್ತು ಭರ್ಜರಿ ಹಿನ್ನೆಲೆ ಸಂಗೀತದ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಟೀಸರ್‌ನ ಆರಂಭದಲ್ಲೇ ಮಕ್ಕಳು ಈ ಟೀಸರ್ ನೋಡಬೇಡಿ, ಪೋಷಕರು ಸಹ ಮಕ್ಕಳಿಗೆ ಇದನ್ನು ತೋರಿಸಬೇಡಿ ಎಂಬ ಎಚ್ಚರಿಕೆಯನ್ನು ಚಿತ್ರತಂಡ ನೀಡಿದೆ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಟೀಸರ್ ಆರಂಭದ ದೃಶ್ಯವೊಂದರಲ್ಲಿ ತಾಬಾಹಿ ಹಾಡಿನ ಹಿನ್ನೆಲೆಯಲ್ಲಿ ಸಮುದ್ರ ತೀರದಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ರೊಮ್ಯಾಂಟಿಕ್ ಸೀನ್ ಒಂದನ್ನು ತೋರಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಟೀಸರ್‌ನ ಉಳಿದ ಭಾಗಗಳೆಲ್ಲವೂ ಆ್ಯಕ್ಷನ್, ಫೈಟಿಂಗ್ ಮತ್ತು ಶೂಟಿಂಗ್ ದೃಶ್ಯಗಳಿಂದಲೇ ತುಂಬಿವೆ. ಇದರ ನಡುವೆ ಬರುವ Love makes monsters of women ಎಂಬ ಡೈಲಾಗ್ ಇಡೀ ಟೀಸರ್‌ನ ಗತ್ತನ್ನೇ ಬದಲಾಯಿಸುತ್ತದೆ. ಇದರ ಬೆನ್ನಲ್ಲೇ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರ ಪವರ್‌ಫುಲ್ ಪಾತ್ರಗಳನ್ನು ರಿವೀಲ್ ಮಾಡಲಾಗಿದ್ದು, ಎಲ್ಲ ನಟಿಯರ ಕೈಯಲ್ಲೂ ಚಾಕು ಮತ್ತು ಗನ್‌ಗಳಿರುವುದು ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ವಿಶೇಷವಾಗಿ ಮಹಿಳೆಯರ ಗುಂಪಿನೊಂದಿಗೆ ಯಶ್ ಫೈಟ್ ಮಾಡುವ ದೃಶ್ಯವೊಂದರಲ್ಲಿ, ಯಶ್ ಅವರು ಲೇಡೀಸ್.. ಲೇಡೀಸ್.. ಒಬ್ಬೊಬ್ಬರೇ ಬರ್ತೀರಾ? ಒಟ್ಟಿಗೆ ಬರ್ತೀರಾ?  ಎಂದು ಮಾಸ್ ಡೈಲಾಗ್ ಹೊಡೆದು ಮಹಿಳೆಯೊಬ್ಬರ ಕಾಲಿಗೆ ಶೂಟ್ ಮಾಡುವ ದೃಶ್ಯದೊಂದಿಗೆ ಟೀಸರ್ ರೋಮಾಂಚನಕಾರಿಯಾಗಿ ಅಂತ್ಯವಾಗುತ್ತದೆ.

ಟೀಸರ್‌ನ ಪ್ರತಿಯೊಂದು ಫ್ರೇಮ್ ಕೂಡ ಅತ್ಯಂತ ರಿಚ್ ಆಗಿ​ ಮೂಡಿಬಂದಿದ್ದು, ಪ್ರೊಡಕ್ಷನ್ ರಿಚ್‌ನೆಸ್ ಎದ್ದುಕಾಣುತ್ತಿದೆ. ಚಿತ್ರದ ಕ್ವಾಲಿಟಿ, ಹಾಲಿವುಡ್ ಶೈಲಿಯ ಸೆಟ್‌ಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಟೀಸರ್ ಮೂಲಕ ಭಾರಿ ಸದ್ದು ಮಾಡುತ್ತಿರುವ ಟಾಕ್ಸಿಕ್ ಸಿನಿಮಾ ಪ್ರೇಕ್ಷಕರಿಗೆ ಎಷ್ಟು ಇಷ್ಟವಾಗಲಿದೆ ಎಂಬುದನ್ನು ತಿಳಿಯಲು ಆಗಸ್ಟ್ 26 ರವರೆಗೆ ಕಾಯಬೇಕಾಗಿದೆ. ಈ ಬಿಗ್ ಬಜೆಟ್ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದು, ರವಿ ಬಸ್ರೂರ್ ಸೇರಿದಂತೆ ಹೆಸರಾಂತ ತಂತ್ರಜ್ಞರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Rocking Star Yash s High-Octane Toxic Teaser Out

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor