ಶಿವಮೊಗ್ಗ: ಒಳಕಲ್ಲು ಇಟ್ಟಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ತಾಯಿ-ಮಗಳಿಂದ ಭೀಕರ ಹಲ್ಲೆ? ಪ್ರಕರಣ  ದಾಖಲು

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

Shivamogga ಶಿವಮೊಗ್ಗ | ಓಡಾಡುವ ದಾರಿಯಲ್ಲಿ ಕಲ್ಲು ಇಟ್ಟಿದ್ದನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ತಾಯಿ ಮತ್ತು ಮಗಳು ಸೇರಿ ಮನಬಂದಂತೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗದ ವಿನೋಬಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದರಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಯಿಂದಾಗಿಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ: ಕಳೆದ 6 ತಿಂಗಳಲ್ಲಿ ಪೊಲೀಸ್​ ಇಲಾಖೆ ವಶಪಡಿಸಿಕೊಂಡ ಗಾಂಜಾ ಎಷ್ಟು ಕೆ ಜಿ ಗೊತ್ತಾ ? 

ಘಟನೆಯ ವಿವರ

ಶಿವಮೊಗ್ಗದ ಪ್ರದೇಶವೊಂದರ ಓಣಿಯಲ್ಲಿ ಈ ಘಟನೆ ನಡೆದಿದೆ. ದೂರುದಾರರು ವಾಸಿಸುವ ಓಣಿಯ ಓಡಾಡುವ ಸ್ಥಳದಲ್ಲಿ ನೆರೆಮನೆಯ ತಾಯಿ ಮತ್ತು ಮಗಳು ಒಳಕಲ್ಲನ್ನು ಅಡ್ಡವಾಗಿ ಇಟ್ಟಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ವ್ಯಕ್ತಿ, ದಾರಿಗೆ ಅಡ್ಡಲಾಗಿ ಇಟ್ಟಿರುವ ಕಲ್ಲನ್ನು ತೆಗೆಯುವಂತೆ ಹೇಳಿದ್ದಾರೆ. ಇದರಿಂದ ಕಕೋಪಗೊಂಡ  ತಾಯಿ-ಮಗಳು ಸಾರ್ವಜನಿಕ ರಸ್ತೆಯಲ್ಲೇ ವ್ಯಕ್ತಿಯನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ.  

ನಂತರ ಮಾತಿಗೆ ಮಾತು ಬೆಳೆದು ತಾಯಿ ಮತ್ತು ಮಗಳು ಇಬ್ಬರೂ ಸೇರಿ ವ್ಯಕ್ತಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತಾಯಿ ವ್ಯಕ್ತಿಯ ಗುಪ್ತಾಂಗಕ್ಕೆ ಒದ್ದರೆ, ಮಗಳು ದೊಣ್ಣೆಯಿಂದ ಎದೆ, ಹೊಟ್ಟೆ ಹಾಗೂ ಪಕ್ಕೆಯ ಭಾಗಕ್ಕೆ ರಭಸವಾಗಿ ತಿವಿದು, ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದಾರೆ. 

ಇದರ ಪರಿಣಾಮ  ವ್ಯಕ್ತಿ ಮನೆಗೆ ಮರಳಿದ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಮೆಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.  ಈ ಹಿನ್ನೆಲೆ ವಿನೋಬಾ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Shivamogga Mother and Daughter Assault Man

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor