ಶಿವಮೊಗ್ಗ; ಪ್ರತಿ ಲೀಟರ್ ಹಾಲಿಗೆ 20 ಬೆಂಬಲ ಬೆಲೆಗೆ ಆಗ್ರಹಿಸಿ ಮುಂದಿನ ವಾರ ಪ್ರತಿಭಟನೆ!

Milk Producers Protest ಶಿವಮೊಗ್ಗ: ಪ್ರಸ್ತುತ ಮಾರುಕಟ್ಟೆಯಲ್ಲಿ ಹಾಲಿನ ದರ ತೀರಾ ಕಡಿಮೆಯಿರುವುದರಿಂದ ಹೈನುಗಾರಿಕೆಯನ್ನು ನಂಬಿರುವ ರೈತ ಕುಟುಂಬಗಳು ಪ್ರತಿದಿನ ನಷ್ಟ ಅನುಭವಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಹಿತರಕ್ಷಣೆಗಾಗಿ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 20 ರೂಪಾಯಿ ಹೆಚ್ಚುವರಿ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಪ್ರೋತ್ಸಾಹ ಧನವನ್ನು 5 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಮುಂದಿನ ವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆ ಪ್ರಕಟಿಸಿದೆ.

ಶಿವಮೊಗ್ಗ: ಕಳೆದ 6 ತಿಂಗಳಲ್ಲಿ ಪೊಲೀಸ್​ ಇಲಾಖೆ ವಶಪಡಿಸಿಕೊಂಡ ಗಾಂಜಾ ಎಷ್ಟು ಕೆ ಜಿ ಗೊತ್ತಾ ? 

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೇದಿಕೆಯ ಗೌರವಾಧ್ಯಕ್ಷ ಜಯರಾಮ ಗೊಂದಿ ಮತ್ತು ಅಧ್ಯಕ್ಷ ಜಿ. ಲೋಕೇಶ್ ಅವರು, ಪ್ರಸಕ್ತ ಸಾಲಿನಲ್ಲಿ ಹಾಲು ಒಕ್ಕೂಟವು ರೈತರು ಉತ್ಪಾದಿಸುವ 3.0 ಜಿಡ್ಡಿನಾಂಶವಿರುವ ಗುಣಮಟ್ಟದ ಹಾಲಿಗೆ ಕನಿಷ್ಠ 30.26 ಹಾಗೂ ಗರಿಷ್ಠ 12.0 ಜಿಡ್ಡಿನಾಂಶವಿರುವ ಹಾಲಿಗೆ 57.41 ನೀಡುತ್ತಿದೆ. ಇದರೊಂದಿಗೆ ಸರ್ಕಾರ ಹೈನುಗಾರಿಕೆಯನ್ನು ಉತ್ತೇಜಿಸಲು ನೀಡುತ್ತಿರುವ 5 ಪ್ರೋತ್ಸಾಹ ಧನವೂ ಕಳೆದ 6 ತಿಂಗಳಿನಿಂದ ಬಾಕಿ ಉಳಿದಿದೆ. ಇದರಿಂದಾಗಿ ಹೈನುಗಾರಿಕೆ ನಡೆಸಲು ರೈತರಿಗೆ ಆದಾಯಕ್ಕಿಂತ ವೆಚ್ಚವೇ ದುಪ್ಪಟ್ಟಾಗುತ್ತಿದ್ದು, ಪಶು ಆಹಾರಗಳ ಬೆಲೆ ಗಗನಕ್ಕೇರಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೈನುಗಾರಿಕೆಗೆ ಅಗತ್ಯವಿರುವ ಕೊಟ್ಟಿಗೆ ನಿರ್ಮಾಣ, ನೀರು, ವಿದ್ಯುತ್, ಹಸಿರು ಮತ್ತು ಒಣ ಮೇವು, ಹಾಲು ಕರೆಯುವ ಹಾಗೂ ಹುಲ್ಲು ಕತ್ತರಿಸುವ ಯಂತ್ರಗಳು, ರಬ್ಬರ್ ಮ್ಯಾಟ್ ಸೇರಿದಂತೆ ಕೂಲಿಕಾರರ ದಿನದ ಭತ್ಯೆ (₹600) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಜೊತೆಗೆ ರಾಸುಗಳಿಗೆ ತಗಲುವ ಕಾಲುಬಾಯಿ ಜ್ವರ, ಚಪ್ಪೆ ರೋಗ, ಗಳಲೆ ರೋಗ, ನೆರಡಿ ರೋಗಗಳ ಚಿಕಿತ್ಸಾ ವೆಚ್ಚ, ಕೃತಕ ಗರ್ಭಧಾರಣೆಯ ವೆಚ್ಚ, ಆಕಸ್ಮಿಕ ಅಪಘಾತಗಳು ಮತ್ತು ದುಬಾರಿ ವಿಮಾ ಕಂತುಗಳನ್ನು ರೈತರೇ ಭರಿಸಬೇಕಾಗಿದೆ. ಇಷ್ಟೆಲ್ಲಾ ಪರಿಶ್ರಮ ಮತ್ತು ಹೂಡಿಕೆಗೆ ತಕ್ಕ ಪ್ರತಿಫಲ ಸಿಗದೇ ಇರುವುದರಿಂದ ಸರ್ಕಾರ ತಕ್ಷಣವೇ ಹಾಲಿನ ದರ ಪರಿಷ್ಕರಿಸಬೇಕು ಎಂದು ವೇದಿಕೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. 

Milk Producers Protest Demanding 20 Hike