ದೊಡ್ಡಪೇಟೆಯಲ್ಲಿ ಇದೆ ಮೊದಲು! 1.5 ಲಕ್ಷದ ನಶೆಗುಳಿಗೆ ಪತ್ತೆ! ಹೇಗಿತ್ತು ಆಪರೇಷನ್!

Doddapete Police in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದೊಡ್ಡಪೇಟೆ ಭಾಗದಲ್ಲಿ ಗಾಂಜಾ ಅಷ್ಟೆ ಅಲ್ಲಾ ಮಾದಕ ಟಾಬ್ಲೇಟ್​ಗಳು ಸಿಗುತ್ತಿವೆ ಅನ್ನೋ ಆರೋಪ ಇತ್ತು. ಆದರೆ ಖಚಿತವಾಗಿರಲಿಲ್ಲ. ಇದೀಗ ಪೊಲಿಸರ ಆಪರೇಷನ್​ವೊಂದರಲ್ಲಿ ದೊಡ್ಡಪೇಟೆಯಲ್ಲಿ ಮಾದಕ ಲೋಕ ಎಲ್ಲೆ ಮೀರಿದೆ ಅನ್ನೋದು ಗೊತ್ತಾಗಿದೆ. ನಿನ್ನೆ ದಿನ ಅಂದರೆ 29 ಜೂನ್​ರಂದು ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಣ್ಣಾನಗರದಲ್ಲಿ ಒಂದುವರೆ ಲಕ್ಷ ಮೌಲ್ಯದ ಎಂಡಿಎಂಎ ಸಿಕ್ಕಿದೆ.

ದಿನಾಂಕ 28-06-2026 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹಾಗೂ ಮಾಲನ್ನು ಜಪ್ತು ಮಾಡಿದ್ದಾರೆ. ತುಂಗಾ ಚಾನಲ್​ ಏರಿಯಾದ ಬಳಿ 100 ಅಡಿ ರಸ್ತೆಯಿಂದ ಅಣ್ಣಾನಗರದ ಕಡೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಆರೋಪಿಯೊಬ್ಬ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ವಿಷಯ ಪೊಲೀಸರಿಗೆ ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್ ತಮ್ಮ ಸಿಬ್ಬಂದಿ ಜೊತೆ ರೇಡ್ ಮಾಡಿದ್ದಾರೆ. ದಾಳಿ ವೇಳೆ ಆರೋಪಿ ಶಾಹೀದ್​ ಖಾನ್ ನನ್ನ ಅರೆಸ್ಟ್ ಮಾಡಿದ್ದು, ಆತನ ಬಳಿಯಿಂದ 1,52,000 ರೂಪಾಯಿಗಳ ಮೌಲ್ಯದ 15.21 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಜೊತೆಯಲ್ಲಿ 40,000 ರೂಪಾಯಿ ಮೌಲ್ಯದ ಮೋಟಾರ್ ಬೈಕನ್ನು ವಶಕ್ಕೆ ಪಡೆದು ಅಮಾನತುಪಡಿಸಿಕೊಂಡಿದ್ದಾರೆ. ಈ ವಿಚಾರವಾಗಿ ಎನ್‌ಡಿಪಿಎಸ್ ಕಾಯ್ದೆ (NDPS ACT), 1985 ರ ಅಡಿಯಲ್ಲಿ ಪ್ರಕರಣ ಸಹ ದಾಖಲಾಗಿದ್ದು, ಪೊಲೀಸ್ ಇಲಾಖೆ ವಾಟ್ಸಾಪ್​ ಮಾಧ್ಯಮ ಗ್ರೂಪ್​ ಮೂಲಕ ಪ್ರಕರಣದ ವಿವರವನ್ನು ಹಂಚಿಕೊಂಡಿದೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz