Road Rage ತೀರ್ಥಹಳ್ಳಿ: ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನೊಂದಿಗೆ ಗಲಾಟೆ ತೆಗೆದ ಕಾರ್ ಚಾಲಕನೊಬ್ಬ, ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರ ಮೂಗಿನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ತೀರ್ಥಹಳ್ಳಿ ಪಟ್ಟಣದ ಬಸ್ ನಿಲ್ದಾಣದ ಬಳಿ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಜ ಟ್ರೋಪಿ : ಶಿವಮೊಗ್ಗ ಯೋಧಾಸ್ಗೆ ಒಂದು ಜಯ, ಒಂದು ಸೋಲು! ಮ್ಯಾಚ್ ಡಿಟೇಲ್ಸ್ ಓದಿ
ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಬ್ಬರು ತಮ್ಮ ರಾತ್ರಿ ಪಾಳಿಯ ಕೆಲಸಕ್ಕೆ ಹಾಜರಾಗಲು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಕೆಎಸ್‌ಆರ್‌ಟಿಸಿ ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ತೀರ್ಥಹಳ್ಳಿ ನಿಲ್ದಾಣಕ್ಕೆ ಬಂದಾಗ ಅತಿಯಾದ ಜನದಟ್ಟಣೆ ಇದ್ದ ಕಾರಣ, ಚಾಲಕ ಬಸ್ಸನ್ನು ನಿಲ್ದಾಣದಿಂದ ಸ್ವಲ್ಪ ಮುಂದೆ ಚಲಾಯಿಸಿದ್ದಾನೆ. ಇದರಿಂದ ಕೆರಳಿದ ತೀರ್ಥಹಳ್ಳಿಯ ಕಾರ್ ಚಾಲಕನೊಬ್ಬ ತನ್ನ ಕಾರ್ ನಲ್ಲಿ ಬಂದು ಬಸ್ಸನ್ನು ಅಡ್ಡಗಟ್ಟಿದ್ದಾನೆ. ಕಾರಿನಿಂದ ಇಳಿದು ಬಂದ ಆತ, ಬಸ್ ನಿರ್ವಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾನೆ. ಬಸ್ಸಿನಲ್ಲೇ ಇದ್ದ ದೂರುದಾರ ಸಿಬ್ಬಂದಿ ಕೆಳಗಿಳಿದು ಬಂದು, ಯಾಕೆ ಸುಮ್ಮನೆ ಬೈಯುತ್ತಿದ್ದೀರಾ? ಎಂದು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಈ ವೇಳೆದ ಆರೋಪಿ ಕಾರ್ ಚಾಲಕ, ಸಿಬ್ಬಂದಿಯ ಮುಖ ಹಾಗೂ ಮೂಗಿನ ಭಾಗಕ್ಕೆ ಏಕಾಏಕಿ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯ ಪೆಟ್ಟಿನ ರಭಸಕ್ಕೆ ಸಿಬ್ಬಂದಿಯ ಮೂಗಿನ ಮೂಳೆ ಮುರಿದು ರಕ್ತಸ್ರಾವ ಆರಂಭವಾಗಿದೆ. ಅಷ್ಟಕ್ಕೇ ನಿಲ್ಲಿಸದ ಆರೋಪಿ, ಸ್ಥಳದಲ್ಲೇ ಸಾರ್ವಜನಿಕರ ಸಮ್ಮುಖದಲ್ಲೇ ಸಿಬ್ಬಂದಿಗೆ “ನಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ತಕ್ಷಣವೇ ಬಸ್ ಸಿಬ್ಬಂದಿ ಗಾಯಾಳುವನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
