ಕೊಲೆಯತ್ನ ಕೇಸ್​ ಬೆನ್ನಲ್ಲೆ, ಭದ್ರಾವತಿಯಲ್ಲಿ ರೌಡಿ ಪರೇಡ್! ಏನೆಲ್ಲಾ ನಡೀತು!?

Rowdy Parade / ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ತಾಲ್ಲೂಕಿನಲ್ಲಿ ಕೊಲೆಯತ್ನ ಪ್ರಕರಣ ನಡೆದ ಬೆನ್ನಲ್ಲೆ ಭದ್ರಾವತಿ ಪೊಲೀಸರು ಒಂದಿಷ್ಟು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಇತ್ತೀಚೆಗೆ ನಡೆದ ಕ್ರೈಂ ಘಟನೆಯ ಹಿನ್ನೆಲೆಯಲ್ಲಿ ರೌಡಿ ಶೀಟರ್​ಗಳನ್ನ ಕರೆಸಿ ಪರೇಡ್ ನಡೆಸಿರುವ ಪೊಲೀಸರು, ಅಪರಾಧಿಕ ಚಟುವಟಿಕೆಗಳನ್ನ ಬಂದ್​ ಮಾಡಬೇಕು ಎಂದು ವಾರ್ನಿಂಗ್​ ಕೊಟ್ಟಿದ್ದಾರೆ. ಭದ್ರಾವತಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ (ಡಿವೈಎಸ್‌ಪಿ) ನೇತೃತ್ವದಲ್ಲಿ ಉಪ ವಿಭಾಗ ಮಟ್ಟದ ರೌಡಿ ಆಸಾಮಿಗಳ ವಿಶೇಷ ಪರೇಡ್ ಅನ್ನು ಆಯೋಜಿಸಲಾಗಿತ್ತು. ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಈ ಮಹತ್ವದ ಕ್ರಮ ಕೈಗೊಂಡಿದೆ ಎಂದು ರೌಡಿ ಪರೇಡ್​ ಬಗ್ಗೆ ಎಸ್​ಪಿ ಶಿವಮೊಗ್ಗ ಅಧಿಕೃತ ಫೇಸ್​ಬುಕ್ ಅಕೌಂಟ್​ನಲ್ಲಿ ಮೆನ್ಶನ್ ಮಾಡಲಾಗಿದೆ.

ಇನ್ನು ಪರೇಡ್‌ನಲ್ಲಿ ಹಾಜರಿದ್ದ ಎಲ್ಲಾ ರೌಡಿ ಶೀಟರ್‌ಗಳ ಪ್ರಸ್ತುತ ಚಲನವಲನಗಳು ಹಾಗೂ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ಕಲೆಹಾಕಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಕೃತ್ಯಗಳಲ್ಲಿ ಭಾಗಿಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಾರದಂತೆ ಎಚ್ಚರಿಕೆ ನೀಡಲಾಗಿದೆ. ಮೇಲಾಗಿ ಪ್ರತಿಯೊಬ್ಬರ ಮೇಲೂ ಇಲಾಖೆಯಿಂದ ಸೂಕ್ತ ನಿಗಾ ಇಡಲಾಗುತ್ತೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳಿಗೆ ಕಾರಣರಾಗಬಾರದು ಹಾಗೂ ಪ್ರತಿಯೊಬ್ಬರೂ ಕಾನೂನನ್ನ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದ್ದು, ಆದೇಶವನ್ನು ಉಲ್ಲಂಘಿಸಿ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಅಂತಾ ಎಚ್ಚರಿಸಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz