ಶಿವಮೊಗ್ಗ : ಸಿದ್ದಯ್ಯ ಸರ್ಕಲ್​, ಮಾರ್ಕೆಟ್, ಅಣ್ಣಾನಗರ, ಬಸ್​ಸ್ಟ್ಯಾಂಡ್​ ಬಳಿ ಒಟ್ಟು ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಸುಮುಟೋ ಕೇಸ್​

ಹಂಚಿಕೊಳ್ಳಿ
WhatsApp Facebook X Telegram
Shivamogga Burglary ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗದ ಸಾಂದರ್ಭಿಕ ಚಿತ್ರ
Shivamogga Burglary

in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸರುತಮ್ಮ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರನ್ನ ವಶಕ್ಕೆ ಪಡೆದು ಅವರ ವಿರುದ್ಧ ಎನ್​ಡಿಪಿಎಸ್​ ಆಕ್ಟ್ ಅಡಿಯಲ್ಲಿ ಕೇಸ್​ ದಾಖಲಿಸಿದ್ದಾರೆ. ಈ ಕಾರ್ಯಾಚರಣೆ ಹಳೆ ಶಿವಮೊಗ್ಗದ ಹೆಚ್​.ಸಿದ್ದಯ್ಯ ಸರ್ಕಲ್​, ಮಾರ್ಕೆಟ್​ ಏರಿಯಾ, ಬಸ್​ ನಿಲ್ದಾಣ, ಅಣ್ಣಾನಗರ ಚಾನಲ್​ ಏರಿಯಾಗಳಲ್ಲಿ ನಡೆದಿದ್ದು, 25 ರಿಂದ 47 ವರ್ಷದ ಒಳಗಿನ ನಾಲ್ವರನ್ನ ವಶಕ್ಕೆ ಪಡೆದು ಸುಮುಟೋ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಪೂರ್ಣ ವರದಿ ಇಲ್ಲಿದೆ.

ದೊಡ್ಡಪೇಟೆ ಠಾಣೆ ಪೊಲೀಸರು (in Shivamogga) ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳ ಪೈಕಿ. ಜೂನ್ 16ರಂದು ಖಾಸಗಿ ಬಸ್ ನಿಲ್ದಾಣದ ಬಳಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆಟೋ ಚಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ದಿನ ಮಾರ್ಕೆಟ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದ ಹೆಚ್​.ಸಿದ್ದಯ್ಯ ಸರ್ಕಲ್​ ನಿವಾಸಿಯೊಬ್ಬರನ್ನು ಎಂಬಾತನನ್ನು ಬಂಧಿಸಿದ್ದಾರೆ.

Whatsapp / https://chat.whatsapp.com/JrsZ8He4nN600n0r3tJItz

ಇದೇ ರೀತಿಯ ಇನ್ನೊಂದು ಕಾರ್ಯಾಚರಣೆಯಲ್ಲಿ ಹೆಚ್​ ಸಿದ್ದಯ್ಯ ಸರ್ಕಲ್​ ಬಳಿ ಗಾಂಜಾ ಅಮಲಿನಲ್ಲಿದ್ದ ವಾಹನ ಚಾಲಕನೊಬ್ಬನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಅಲ್ಲದೆ, ಅಣ್ಣಾನಗರ ಚಾನಲ್ ಬಳಿ ಗಾಂಜಾ ಸೇವನೆ ಮಾಡಿದ್ದ ಮಿಳ್ಳಘಟ್ಟದ ನಿವಾಸಿ, ವೆಲ್ಡಿಂಗ್ ಕೆಲಸಗಾರನೊಬ್ಬನನ್ನು ಸಹ ವಶಕ್ಕೆ ಪಡೆಯಲಾಗಿದೆ.

ವಿವಿಧ ಏರಿಯಾಗಳಲ್ಲಿ ಗಸ್ತು ತಿರುಗುತ್ತಿದ್ದ ಠಾಣೆಯ ಸಿಬ್ಬಂದಿ, ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುವ ಹಾಗೂ ಅನುಮಾನಸ್ಪದವಾಗಿ ಮತ್ತು ಅಸಹಜವಾಗಿ ತಿರುಗಾಡುವ ವ್ಯಕ್ತಿಗಳ ಮೇಲೆ ನಿಗಾ ಇಡುತ್ತಿದ್ದಾರೆ. ಹೀಗೆ ನಿಗಾ ಇಟ್ಟ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಆಯಾ ಏರಿಯಾಗಳಲ್ಲಿ ಅನುಚಿತವಾಗಿ ವರ್ತಿಸ್ತಿರುವುದು ಕಂಡುಬಂದಿದೆ. ಅವರನ್ನು ಬೆನ್ನಟ್ಟಿದ ಸಿಬ್ಬಂದಿ, ಆರೋಪಿಗಳನ್ನ ವಶಕ್ಕೆ ಪಡೆದು ಸುಮುಟೋ ಕೇಸ್​ ದಾಖಲಿಸಿದ್ದಾರೆ.

ಇನ್ನೂ ಎಲ್ಲಾ ನಾಲ್ವರು ಆರೋಪಿಗಳನ್ನು ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪ್ರತಿಯೊಬ್ಬರು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ ಎಂದು ಮಲೆನಾಡು ಟುಡೆಗೆ ತಿಳಿದುಬಂದಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor