ಶಿವಮೊಗ್ಗ : ಮಲೆನಾಡಿನಲ್ಲಿ ಮುಂಗಾರು ಆರಂಭ; ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ, ಅತಿ ಹೆಚ್ಚು ಮಳೆ ಬಿದ್ದ ತಾಲೂಕು ಯಾವುದು? 

ಹಂಚಿಕೊಳ್ಳಿ
WhatsApp Facebook X Telegram
Shivamogga Monsoon Report Karnataka Rain Report Shivamogga Records 81mm Rain,
Shivamogga Monsoon Report

ಶಿವಮೊಗ್ಗ : ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲಾದ್ಯಂತ ಮುಂಗಾರು ಮಳೆಯ ಮಾರುತಗಳು ಪ್ರವೇಶಿಸಿದ್ದು, ಆರಂಭಿಕ ವಾರದಲ್ಲಿ ಜಿಲ್ಲೆಯಾದ್ಯಂತ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜೂನ್ 1 ರಿಂದ ಜೂನ್ 6 ರವರೆಗಿನ ಮಳೆ ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯಲ್ಲೇ ಸಾಗರ ತಾಲೂಕಿನಲ್ಲಿ ಅತ್ಯಧಿಕ 57.30 ಮಿ.ಮೀ ಮಳೆ ದಾಖಲಾಗಿದೆ.  

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಜೂನ್ ಆರಂಭದ 6 ದಿನಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 180.60 ಮಿ.ಮೀ ಮಳೆಯಾಗಿದ್ದು, ಸಾಗರ ತಾಲೂಕು ಮೊದಲ ಸ್ಥಾನದಲ್ಲಿದ್ದರೆ, ಹೊಸನಗರ ತಾಲೂಕು 36.50 ಮಿ.ಮೀ ಮಳೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಶಿವಮೊಗ್ಗ ತಾಲೂಕಿನಲ್ಲಿ 30.50 ಮಿ.ಮೀ, ತೀರ್ಥಹಳ್ಳಿಯಲ್ಲಿ 26.20 ಮಿ.ಮೀ, ಶಿಕಾರಿಪುರದಲ್ಲಿ 13.30 ಮಿ.ಮೀ ಮತ್ತು ಸೊರಬದಲ್ಲಿ 10.90 ಮಿ.ಮೀ ಮಳೆಯಾಗಿದೆ. ರಿ ಭದ್ರಾವತಿಯಲ್ಲಿ ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಅಂದರೆ ಕೇವಲ 5.90 ಮಿ.ಮೀ ಮಳೆಯಷ್ಟೇ ದಾಖಲಾಗಿದೆ.

Shivamogga Monsoon Report 2026  

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor