SHIVAMOGGA NEWS TODAY

ಶಿವಮೊಗ್ಗ: ವ್ಯಾಪಾರಿಯ ಗುಜುರಿ ವಸ್ತುವಿಗೆ ಕನ್ನ ಹಾಕ್ತಿದ್ದ ಮಹಿಳಾ ಕಳ್ಳರ ಗ್ಯಾಂಗ್​​: ಪ್ರಕರಣದ ಪತ್ತೆಯಾಗಿದ್ದು ಹೇಗೆ ಗೊತ್ತಾ? 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ :  ಗುಜುರಿ ವಸ್ತುಗಳನ್ನು ಆಯ್ದು ಸಂಗ್ರಹಿಸಿಡುತ್ತಿದ್ದ ವ್ಯಾಪಾರಿಯೊಬ್ಬರ ಗುಜುರಿ ವಸ್ತುಗಳನ್ನು ಕದಿಯುತ್ತಿದ್ದ ಮಹಿಳೆಯ ಗುಂಪೊಂದನ್ನು 112 ಪೊಲೀಸರು ಪತ್ತೆಹಚ್ಚಿದ್ದಾರೆ. 

ಶಿವಮೊಗ್ಗ : ಮಲೆನಾಡಿನಲ್ಲಿ ಮುಂಗಾರು ಆರಂಭ; ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ, ಅತಿ ಹೆಚ್ಚು ಮಳೆ ಬಿದ್ದ ತಾಲೂಕು ಯಾವುದು? 

ಘಟನೆ ವಿವರ

ಈ ಘಟನೆ ನಡೆದಿದ್ದು ತಂಗಾನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ. ಗುಜುರಿ ವ್ಯಾಪಪಾರಿಯೊಬ್ಬರು ಪ್ರತಿನಿತ್ಯ ಎಲ್ಲೆಡೆ ಗುಜುರಿ ವಸ್ತು ತಂದು ತನ್ನ ಅಂಗಡಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ಆದರೆ ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ಆ ಗುಜುರಿ ವಸ್ತುಗಳು ಕಳುವಾಗುತ್ತಿದ್ದವು. ಇದರಿಂದ ಬೇಸತ್ತ ವ್ಯಾಪಾರಿ 112 ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲಿಸರು ಅಂಗಡಿಯ ಪಕ್ಕದಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದ್ದಾರೆ. ಆಗ ಗುಜುರಿ ಆಯುವ ಮಹಿಳೆಯರ ಗುಂಪೊಂದು  ಗುಜುರಿ  ಕಳತನ ಮಾಡಿರುವುದು ಕಂಡಬಂದಿದೆ. ಈ ಹಿನ್ನೆಲೆ ಸಿಸಿಟಿವಿ ಆಧಾರದ ಹಿನ್ನೆಲೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸುವಂತೆ 112 ಪೊಲೀಸರು ದೂರುದಾರರಿಗೆ ಸೂಚಿಸಿದ್ದಾರೆ.

Shivamogga 112 Police Bust Scrap Theft Gang

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.