ಸಾಮಾನ್ಯವಾಗಿ ಟ್ಯಾಲೆಂಟ್ ಯಾರಲ್ಲಿ ಇರುತ್ತೆ ? ಹೇಗೆ ಇರುತ್ತೆ? ಯಾವ ರೀತಿ ಹೊರಬರುತ್ತೆ ಎಂದು ಹೇಳಲು ಆಗಲ್ಲ, ಊಹಿಸಲು ಆಗಲ್ಲ . ಇದಕ್ಕೆ ಉದಾಹರಣೆ ಎಂಬಂತೆ ಚಿಕ್ಕಮಗಳೂರಿನ ಒಂದು ವಿಚಾರ, ಇದೀಗ ಮೀಡಿಯಾ ಸುದ್ದಿಯಾಗುತ್ತಿದೆ. ಇಲ್ಲೊಬ್ಬರು ತಮ್ಮ ಹಳೆಯ ಟಿವಿಎಸ್ ಎಕ್ಸಲ್ನ್ನೇ ಈ ವೆಹಿಕಲ್ ಆಗಿ ಕನ್ವರ್ಟ್ ಮಾಡಿದ್ದಾರೆ. ಸದ್ಯ ಈ ವಿಷಯವೇ ಮಲೆನಾಡ ಮಡ್ ರೋಡಗಳಲ್ಲಿ ಚರ್ಚೆಗೆ ಬಂದಿದೆ.
ಚಿಕ್ಕಮಗಳೂರು ಸ್ಟೋರಿ, ಮನಸ್ಸಿದ್ದರೇ ಮಾರ್ಗ ಕಣ್ರಿ
ಹೌದು, ಟಿವಿಎಸ್ ಎಕ್ಸೆಲ್ ಮೊಪೆಡ್ ಬೈಕನ್ನು ಬ್ಯಾಟರಿ ಚಾಲಿತ ಇ- ಬೈಕ್ ಆಗಿ ಪರಿವರ್ತಿಸುವ ಮೂಲಕ ಚಿಕ್ಕಮಗಳೂರಿನ ಯುವಕರೊಬ್ಬರು ಗಮನ ಸೆಳೆಯುತ್ತಿದ್ದಾರೆ. ತಾಲೂಕಿನ ಕುರುವಂಗಿ ಗ್ರಾಮದ ಸುನಿಲ್ ತಮ್ಮ ಬಳಿ ಇದ್ದ ಹಳೇಯ ಗಾಡಿಯನ್ನೇ ಇ-ಬೈಕ್ ಆಗಿ ಬದಲಾಯಿಸಿದ್ದಾರೆ. ಇದಕ್ಕಾಗಿ ಸುಮಾರು 45 ಸಾವಿರ ರೂಪಾಯಿ ಖರ್ಚು ಮಾಡಿ ತಮ್ಮ ಪ್ರಯತ್ನದಲ್ಲಿ ಯಶಸ್ಸು ಸಹ ಗಳಿಸಿದ್ದಾರೆ.
ತಮಿಳುನಾಡಿನ ಪ್ರೇರಣೆ, ಯೂಟ್ಯೂಬ್ನಿಂದ ಮಾಹಿತಿ
ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಸುನಿಲ್. ಏನಾದರೂ ಹೊಸದಾಗಿ ಮಾಡಬೇಕು ಅಂದುಕೊಂಡಿದ್ದ ಇವರಿಗೆ ಯೂಟ್ಯೂಬ್ ನಲ್ಲಿ ತಮಿಳುನಾಡಿನ ಯುವಕ ನೊಬ್ಬ ಬೈಕ್ ರೆಡಿ ಮಾಡಿದ ವಿಡಿಯೋ ಪ್ರೇರಣೆ ಕೊಟ್ಟಿದೆ. ಹೇಗಿದ್ದರೂ ತಮ್ಮದೊಂದು ಓಲ್ಡ್ ಗಾಡಿಯಿದೆ. ಅದನ್ನೆ ಏಕೆ ಇವಿ ವೆಹಿಕಲ್ ಮಾಡಬಾರದು ಎಂದುಕೊಂಡವರೆ ಕಾರ್ಯಪ್ರವೃತ್ತ ರಾಗಿದ್ದಾರೆ. ಆ ಕೆಲಸ ಇದೀಗ ಸಕ್ಸಸ್ ತಂದುಕೊಟ್ಟಿದೆ.
ಇನ್ನೂ ಈ ಬೈಕ್ಗೆ 750 ವೋಲ್ಟ್ ಮೋಟಾರ್, 48 ವೋಲ್ಟ್ 30 AH ಬ್ಯಾಟರಿ ಹಾಗೂ 1000 ವ್ಯಾಟ್ ಕಂಟ್ರೋಲರ್ ಬಳಸಲಾಗಿದೆ. ಕೇವಲ 4 ಗಂಟೆ ಚಾರ್ಜ್ ಮಾಡಿದರೆ ಬರೋಬ್ಬರಿ 45 ಕಿಲೋಮೀಟರ್ ಮೈಲೇಜ್ ನೀಡುತ್ತಿದೆ. ಈ ನಿಟ್ಟಿನಲ್ಲಿ ಕಂಡುಕೊಂಡ ಯಶಸ್ಸು, ಸುನಿಲ್ಗೆ ಒಂದಿಷ್ಟು ಹೆಸರು ತಂದುಕೊಡುತ್ತಿದೆ.
