ಒಂದೇ ದಿನ ಒಂದೇ ಕುಟುಂಬದ ನಾಲ್ಚರು ನಾಪತ್ತೆ. ಎಲ್ಲಾದರೂ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

ಹಂಚಿಕೊಳ್ಳಿ
WhatsApp Facebook X Telegram
Four Missing
Four Missing

Four Missing ಶಿವಮೊಗ್ಗ: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರದ ನಿವಾಸಿಗಳಾದ  ಒಂದೇ ಕುಟುಂಬದ ನಾಲ್ವರು ಕಳೆದ ಏಪ್ರಿಲ್ 15 ರಿಂದ ಕಾಣೆಯಾಗಿದ್ದು,  ಅವರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ.

ಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ 

ನಾಪತ್ತೆಯಾದವರ ಸಂಪೂರ್ಣ ವಿವರ

ಮೊದಲನೆಯದಾಗಿ, 62 ವರ್ಷದ ಮೋಹಮ್ಮದ್ ಇಕ್ಬಾಲ್ ಅವರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಮತ್ತು ಬಿಳಿ ಮೈಬಣ್ಣ ಹೊಂದಿದ್ದಾರೆ. ಇವರೊಂದಿಗೆ 54 ವರ್ಷದ ನಸ್ರತ್ ಬಾನು ಅವರು ನಾಪತ್ತೆಯಾಗಿದ್ದು, ಇವರು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಸೀಳು ತುಟಿಯ ಗುರುತನ್ನು ಹೊಂದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. 

ಇದೇ ಕುಟುಂಬದ ಯುವಕರಾದ 35 ವರ್ಷದ ಮೋಹಮ್ಮದ್ ಫಾಜಿಲ್ (5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹಾಗೂ ಎದೆಯ ಭಾಗದಲ್ಲಿ ಚರ್ಮಗಂಟು ಇರುವಿಕೆ) ಮತ್ತು 32 ವರ್ಷದ ಮೊಹಮ್ಮದ್ ಆದಿಲ್ (5.4 ಅಡಿ ಎತ್ತರ, ದಪ್ಪ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ) ಇಬ್ಬರೂ ಸಹ ಅದೇ ದಿನದಿಂದ ಕಾಣೆಯಾಗಿದ್ದಾರೆ. 

ಈ ನಾಲ್ಕೂ ಜನ ಕಾಣೆಯಾದವರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಲಭ್ಯ ಆದಲ್ಲಿ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08182-261414, 9972426144, 9480803345 ಅಥವಾ 6264571710 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ಅತ್ಯಂತ ತುರ್ತಾಗಿ ವಿನಂತಿಸಿದೆ.

Four Missing from Family in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor