ಪ್ರೀತಿಗಾಗಿ ಕಳುಹಿಸಿದಳು ಖಾಸಗಿ ಚಿತ್ರ, ಮಾರನೇ ದಿನ ಆ ಪೋಟೋ ಪೋಸ್ಟ್​ ಆಗಿದ್ದೆಲ್ಲಿ ಗೊತ್ತಾ ?

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

Shimoga Cyber Crime ಶಿವಮೊಗ್ಗ: ಪ್ರೀತಿಯ ಹೆಸರಿನಲ್ಲಿ ಯುವತಿಯೊಬ್ಬಳನ್ನು ನಂಬಿಸಿ, ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆಶಿವಮೊಗ್ಗದಲ್ಲಿ ನಡೆದಿದೆ. 

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ನಗರದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕಳೆದ ಮೂರು ವರ್ಷಗಳಿಂದ ಯುವಕನೊಬ್ಬನ ಪರಿಚಯವಿತ್ತು. ಇಬ್ಬರೂ ಸ್ನೇಹಿತರಾಗಿದ್ದರು. ಆದರೆ, ಈ ಸ್ನೇಹವನ್ನೇ ಬಂಡವಾಳ ಮಾಡಿಕೊಂಡ ಯುವಕ, ತಾನು ನಿನ್ನನ್ನುಪ್ರೀತಿಸುತ್ತಿದ್ದೇನೆ ಎಂದು ನಂಬಿಸಿ ಪ್ರೇಮದ ನಾಟಕವಾಡಿದ್ದಾನೆ. 

ಯುವಕನ ಮಾತನ್ನು ಸತ್ಯವೆಂದು ನಂಬಿದ ಯುವತಿ ಆತನೊಂದಿಗೆ ಆತ್ಮೀಯವಾಗಿ ಒಡನಾಡಿದ್ದಾಳೆ. ಇದೇ ಸಲುಗೆಯನ್ನು ಬಳಸಿಕೊಂಡ ಆರೋಪಿ, ಯುವತಿಯಿಂದ ಆಕೆಯ ಕೆಲವು ಖಾಸಗಿ ಭಾವಚಿತ್ರಗಳನ್ನು ಪಡೆದುಕೊಂಡಿದ್ದಾನೆ. ಆದರೆ, ಫೋಟೋ ಸಿಗುತ್ತಿದ್ದಂತೆಯೇ ತನ್ಯುವಕ, ಇನ್‌ಸ್ಟಾಗ್ರಾಮ್‌ನಲ್ಲಿ ವಿವಿಧ ನಕಲಿ ಖಾತೆಗಳನ್ನು ತೆರೆದು ಆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. 

ತನ್ನ ಹೆಸರಿನಲ್ಲೇ ಫೋಟೋಗಳು ವೈರಲ್ ಆಗುತ್ತಿರುವುದನ್ನು ಗಮನಿಸಿದ ಸಂತ್ರಸ್ತೆ ತಕ್ಷಣ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Shimoga Cyber Crime Private Photos Leaked

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor