SHIVAMOGGA NEWS TODAY

ಪೊಲೀಸ್​ ಅಧಿಕಾರಿಯನ್ನೂ ಬಿಡದ RTO ಚಲನ್​​​ ಪ್ರಾಢ್​​, ಕಳೆದುಕೊಂಡಿದ್ದೆಷ್ಟು ಲಕ್ಷ ಗೊತ್ತಾ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Cyber Crime ಶಿಕಾರಿಪುರ : ಶಿಕಾರಿಪುರದ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರಿಗೆ ವಂಚಕರು  RTO ಚಲನ್​ ಕಳುಹಿಸಿ ಲಕ್ಷಾಂತರ ರೂಪಾಯಿ ಹಣವವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗ ನಂಬರ್​ 1, ಅನಿರೀಕ್ಷಿತ ತಪಾಸಣೆ ಸೇರಿದಂತೆ ಇನ್ನಿತರೇ ಸುದ್ದಿಗಳ ಇ-ಪೇಪರ್​ನಲ್ಲಿ

ಮೇ 08 ರಂದು ಈ ಪೊಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆಗೆ RTO ಚಲನ್ ಹೆಸರಿನಲ್ಲಿ ಎಪಿಕೆಫೈಲ್ ಒಂದು ಬಂದಿದೆ. ವಾಹನಕ್ಕೆ ಸಂಬಂಧಿಸಿದ ದಂಡವಿರಬಹುದೆಂದು ಭಾವಿಸಿದ ಅವರು ಆ ಫೈಲ್ ಅನ್ನು ಓಪನ್ ಮಾಡಿದ್ದಾರೆ. ಆದರೆ, ಅದರಲ್ಲಿ ಯಾವುದೇ ಮಾಹಿತಿ ಕಾಣಿಸದ ಕಾರಣ ಅವರು ಆ ಆ್ಯಪ್‌ನಿಂದ ಹೊರಬಂದಿದ್ದಾರೆ.

ಅಪ್ಲಿಕೇಶನ್ ಓಪನ್ ಮಾಡಿದ ಕೆಲವೇ ಹೊತ್ತಿನಲ್ಲಿ ಅಧಿಕಾರಿಯ ಮೊಬೈಲ್‌ಗೆ ಅನೇಕ ಮೆಸೇಜ್​ಗಳು ಬಂದಿವೆ. ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 6,78,759 ರೂಪಾಯಿ ಹಣ ಕಡಿತವಾಗಿರುವುದನ್ನು ಕಂಡು ಅವರು ಶಾಕ್​​ಆಗಿದ್ದಾರೆ. 

ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡ ಮಹಿಳಾ ಅಧಿಕಾರಿ, ವಂಚಕರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Cyber Crime Woman Police Officer Scammed

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.