ಪಾರಿವಾಳ ಸಾಕಿದ್ದಕ್ಕೆ ಪೊಲೀಸರಿಗೆ ದೂರು,ನೆರೆಮನೆಯವರ ನಡುವೆ ಕಿರಿಕಿರಿ!

ಹಂಚಿಕೊಳ್ಳಿ
WhatsApp Facebook X Telegram
Bhadravathi Neighbor Complaints to 112 Police
Bhadravathi Neighbor Complaints to 112 Police

ಭದ್ರಾವತಿ: ಪಾರಿವಾಳ ಸಾಕಿದ ವಿಚಾರವಾಗಿ ಪಕ್ಕದ ಮನೆಯವರ ವಿರುದ್ಧವೇ 112 ಪೊಲೀಸರಿಗೆ ಕರೆ ಮಾಡಿ ದೂರು ನೀಡಿರುವ ಅಪರೂಪದ ಘಟನೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ 

ನೆರೆಮನೆಯವರೊಡನೆ ನಗುತಲಿರು, ಹೊರೆಮನೆಯವರೊಡನೆ ಹಂಚಿ ತಿನ್ನು ಎಂಬ ಗಾದೆ ಮಾತಿದೆ. ಆದರೆ, ಈ ಘಟನೆಯನ್ನು ಗಮನಿಸಿದರೆ ಇಂದಿನ ಕಾಲಕ್ಕೆ ಈ ಮಾತು ಅನ್ವಯವಾಗುತ್ತಿಲ್ಲವೇನೋ ಎನಿಸುತ್ತಿದೆ. ಏಕೆಂದರೆ ಪಕ್ಕದ ಮನೆಯವರು ಪಾರಿವಾಳ ಸಾಕಿದ್ದರಿಂದ ತಮಗೆ ಕಿರಿಕಿರಿ ಉಂಟಾಗುತ್ತಿದೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬರು ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು 112 ಸಂಖ್ಯೆಗೆ ಕರೆ ಮಾಡಿದ್ದರು. ತಮ್ಮ ಪಕ್ಕದ ಮನೆಯವರು ಪಾರಿವಾಳಗಳನ್ನು ಸಾಕಿರುವುದರಿಂದ ತಮಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು, ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ಮತ್ತು ಎಚ್ಚರಿಕೆ ನೀಡಿದ್ದಾರೆ.

Bhadravathi Neighbor Complaints to 112 Police

Bhadravathi Neighbor Complaints to 112 Police
Bhadravathi Neighbor Complaints to 112 Police
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor