ಗೃಹಲಕ್ಷ್ಮಿ ಮಾರ್ಚ್​, ಏಪ್ರಿಲ್​ ಕಂತು ಯಾವಾಗ ಬರುತ್ತೆ! ಲಕ್ಷ್ಮೀ ಹೆಬ್ಬಾಳಕರ್ ನೀಡಿದ್ರು ಸುಳಿವು

ಹಂಚಿಕೊಳ್ಳಿ
WhatsApp Facebook X Telegram
axmi Hebbalkar on Gruha Lakshmi money pending amount credit
axmi Hebbalkar on Gruha Lakshmi money pending amount credit

ಮಲೆನಾಡು ಟುಡೆ ಸುದ್ದಿ : ಗೃಹಲಕ್ಷ್ಮೀ ಯೋಜನೆಯ ಹಣ ಯಾವಾಗ ಬರುತ್ತೆ ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಇದರ ನಡುವೆ ಸರ್ಕಾರದಿಂದಲೆ ಈ ಬಗ್ಗೆ ಸ್ಪಷ್ಟ ಮಾಹಿತಿ ಒಂದು ಹೊರಬಿದ್ದಿದೆ.

ಲಕ್ಷ್ಮೀ ಹೆಬ್ಬಾಳಕರ್ ನೀಡಿದ್ರು ಸುಳಿವು

ಮಾರ್ಚ್ ಗೃಹಲಕ್ಷ್ಮಿ ಹಣ ಇನ್ನು 3 ಅಥವಾ 4 ದಿನದಲ್ಲಿ ಹಾಗೂ ಏಪ್ರಿಲ್​ ತಿಂಗಳ ಹಣ ಮುಂದಿನ 8-10 ದಿನಗಳಲ್ಲಿ ಮಹಿಳೆಯರ ಖಾತೆಗೆ ಜಮೆಯಾಗಲಿದೆ ಅಂತಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿಯ ಬಾಕನೂರು ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕೆಲಸ ಮಾಡುವುದೆಂದರೆ ನನಗೆ ಹುಚ್ಚು, 2011ರಲ್ಲಿ ಚುನಾವಣೆಯಲ್ಲಿ ಸೋತ ನಂತರವೂ ಕೆಲಸ ಮಾಡುತ್ತಲೇ ಇದ್ದೆ. ಬೇರೆಯವರಂತೆ ನಾಟಕ ಮಾಡುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೆ ಮಾರ್ಚ್ ಗೃಹಲಕ್ಷ್ಮಿ ಹಣ ಇನ್ನು 3 ಅಥವಾ 4 ದಿನದಲ್ಲಿ ಹಾಗೂ ಏಪ್ರಿಲ್​ ತಿಂಗಳ ಹಣ ಮುಂದಿನ 8-10 ದಿನಗಳಲ್ಲಿ ಮಹಿಳೆಯರ ಖಾತೆಗೆ ಜಮೆಯಾಗಲಿದೆ ಅಂತಾ ತಿಳಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor