ಗುಡ್ ನ್ಯೂಸ್ : ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಕಾಯಂ: ವೇಳಾಪಟ್ಟಿ ಗಮನಿಸಿ!

ಹಂಚಿಕೊಳ್ಳಿ
WhatsApp Facebook X Telegram
ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಕಾಯಂ Yesvantpur-Talguppa Special Train Regularised Timings and Details Yesvantpur Talguppa Express, Shivamogga train route, IRCTC Talaguppa
Yesvantpur-Talguppa Special Train Regularised Timings and Details Yesvantpur Talguppa Express, Shivamogga train route, IRCTC Talaguppa

ಮಲೆನಾಡು ಟುಡೆ / ಶಿವಮೊಗ್ಗ: ಇಷ್ಟು ದಿನ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ಯಶವಂತಪುರ-ತಾಳಗುಪ್ಪ-ಯಶವಂತಪುರ (ರೈಲ್ವೆ ಸಂಖ್ಯೆ 16555/16556 ) ರೈಲನ್ನು ಕಾಯಂ ಮಾಡಿ ರೈಲ್ವೆ ಇಲಾಖೆ ಆದೇಶಿಸಿದೆ.

ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಕಾಯಂ

ಈ ರೈಲು ಇದುವರೆಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಯಶವಂತಪುರ-ತಾಳಗುಪ್ಪ-ಯಶವಂತಪುರ ಸಂಚರಿಸುತ್ತಿತ್ತು. ಈಗ ಇದನ್ನು ಸಂಖ್ಯೆ 16555/16556 ಎಂದು ಮಾರ್ಪಡಿಸಲಾಗಿದೆ.

ಅಲ್ಲದೆ, ಪ್ರತಿ ಶುಕ್ರವಾರ ರಾತ್ರಿ 10.20ಕ್ಕೆ ಯಶವಂತಪುರದಿಂದ ಹೊರಟು ಶನಿವಾರ ಬೆಳಗ್ಗೆ 5.30ಕ್ಕೆ ತಾಳಗುಪ್ಪ ತಲುಪಲಿದೆ. ಶನಿವಾರ ಬೆಳಗ್ಗೆ 10.30ಕ್ಕೆ ತಾಳಗುಪ್ಪದಿಂದ ಹೊರಟು ಸಂಜೆ 5.15ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ಈ ಕುರಿತು ಸಂಸದ ಬಿ.ವೈ.ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದು ಈ ರೈಲಿನಿಂದ ಶಿವಮೊಗ್ಗ ಸಾಗರ, ತೀರ್ಥಹಳ್ಳಿ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಿಗೆ ಅನುಕೂಲ ಎಂದಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor