ಸಖಿ ಕೇಂದ್ರದ ಮುಂದೆ ಗದ್ದಲ ಸೃಷ್ಟಿಸಿದ ಮಹಿಳೆ, ಅಕ್ಕ ಪಡೆಯಿಂದ ಮಾನವೀಯ ಕಾರ್ಯ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ :  ಮಕ್ಕಳ ಅಗಲಿಕೆಯಿಂದ ಮನನೊಂದು, ಮದ್ಯದ ಅಮಲಿನಲ್ಲಿ ಸಖಿ ಕೇಂದ್ರದ ಮುಂದೆ ಗದ್ದಲ ಸೃಷ್ಟಿಸುತ್ತಿದ್ದ ಮಹಿಳೆಯನ್ನು ಸಮಾಧಾನಪಡಿಸಿದ ಅಕ್ಕ ಪಡೆಯು ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದೆ.

ಶಿವಮೊಗ್ಗ: ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ದಂಪತಿಗಳಿಬ್ಬರೂ ಮಕ್ಕಳ ಸರಿಯಾದ ಆರೈಕೆ ಮಾಡದ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಇತ್ತೀಚೆಗಷ್ಟೇ ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಮಕ್ಕಳನ್ನು ನೋಡಬೇಕೆಂಬ ಹಂಬಲದಿಂದ ಹಾಗೂ ಅವರ ವಿರಹದಿಂದ ನೊಂದಿದ್ದ ತಾಯಿ, ಮದ್ಯಪಾನ ಮಾಡಿ ಸಖಿ ಕೇಂದ್ರದ ಬಳಿ ಬಂದು ಉಪಟಳ ನೀಡುತ್ತಿದ್ದರು. 

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಕ್ಕ ಪಡೆಯ ಸಿಬ್ಬಂದಿ, ಪರಿಸ್ಥಿತಿಯನ್ನು ಅತ್ಯಂತ ಸಂಯಮದಿಂದ ನಿಭಾಯಿಸಿದರು. ಮಹಿಳೆಯ ಸ್ಥಿತಿಯನ್ನು ಕಂಡು ಆಕೆಗೆ ಸಾಂತ್ವನ ಹೇಳಿದ ಪೊಲೀಸರು, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸು, ನಿನ್ನ ಜೀವನವನ್ನು ಸರಿಪಡಿಸಿಕೊ ಎಂದು ಹಿತವಚನ ನೀಡಿದರು. 

ಬಳಿಕ ಮಹಿಳೆಯ ವಿಳಾಸವನ್ನು ಪಡೆದ ಅಕ್ಕ ಪಡೆಯು ಆಕೆಯನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದರು. ಅಲ್ಲಿ ಆಕೆಯ ಪತಿಯನ್ನು ಭೇಟಿಯಾಗಿ, ಕುಟುಂಬದ ಜವಾಬ್ದಾರಿಯ ಬಗ್ಗೆ ಇಬ್ಬರಿಗೂ ತಿಳುವಳಿಕೆ ನೀಡಿ ಬಂದಿದ್ದಾರೆ. ಅಕ್ಕ ಪಡೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Akka Pades Humanitarian Act Sakhi Kendra

Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Akka Pades
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor