ಶಿವಮೊಗ್ಗ ನಗರದ ಈ ಭಾಗಗಳಲ್ಲಿ 2 ದಿನ  ವಿದ್ಯುತ್ ವ್ಯತ್ಯಯ

ಹಂಚಿಕೊಳ್ಳಿ
WhatsApp Facebook X Telegram
Shivamogga Power Cut ವಿದ್ಯುತ್​​ ವ್ಯತ್ಯಯ
Shivamogga Power Cut ವಿದ್ಯುತ್​​ ವ್ಯತ್ಯಯ

ಶಿವಮೊಗ್ಗ :  ನಗರದ ಉಪವಿಭಾಗ-1 ಹಾಗೂ ಘಟಕ-2ರ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ತುರ್ತು ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 13 ಮತ್ತು 14 ರಂದು ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಇಲಾಖೆ ಮಾಹಿತಿ ನೀಡಿದೆ.

ಶಿವಮೊಗ್ಗ: ಜಿಮ್​​ ಟ್ರೈನರ್​​ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ, ಮಾಸ್ಕ್​ ಮ್ಯಾನ್​ ಪರಾರಿ 

ವಿದ್ಯುತ್ ವ್ಯತ್ಯಯವು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಇರಲಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಮೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ಸೀತಾರಾಮ ಕಲ್ಯಾಣ ಮಂದಿರ ಅಡ್ಡರಸ್ತೆ, ಶನಿ ಮಹಾತ್ಮ ದೇವಸ್ಥಾನ ಅಡ್ಡರಸ್ತೆ, ವಿದ್ಯುತ್ ಪರಿವೀಕ್ಷಕರ ಕಚೇರಿ ರಸ್ತೆ, ವಾತ್ಸಲ್ಯ ಆಸ್ಪತ್ರೆ ಆವರಣ, ಮಲ್ಲಿಕಾರ್ಜುನ ಚಿತ್ರಮಂದಿರ ಅಡ್ಡರಸ್ತೆ, ಪಾರ್ಕ್ ಬಡಾವಣೆ ಹಾಗೂ ದುರ್ಗಿಗುಡಿ ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ.

Power Cut in Shimoga List of Affected Areas

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor