ಶಿವಮೊಗ್ಗ: ಮತ್ತೊಮ್ಮೆ ಅಲರ್ಟ್​ ಯಾಸೀನ್ ಖುರೇಶಿ ಹತ್ಯೆಯ ಪ್ರಮುಖ ಆರೋಪಿ ಆದಿಲ್​​, ಬೆದರಿಸಿ 5 ಲಕ್ಷಕ್ಕೆ ಬೇಡಿಕೆ

ಹಂಚಿಕೊಳ್ಳಿ
WhatsApp Facebook X Telegram
Shimoga Honda ActivaRowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news BNS 292 shivamogga doddapete caseshivamogga hero honda bike theft shivamogga news today
Shimoga Honda Activa Rowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news shivamogga doddapete caseshivamogga news today

ಶಿವಮೊಗ್ಗ : ಯಾಸೀನ್ ಖುರೇಶಿ ಹತ್ಯೆಯ ಪ್ರಮುಖ ಆರೋಪಿ ಆದಿಲ್ ಶಿವಮೊಗ್ಗದಲ್ಲಿ ಮತ್ತೊಮ್ಮೆ ಸಕ್ರಿಯನಾಗಿದ್ದಾನೆ. ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ  ಇರ್ಫಾನ್​ ಖಾನ್​​ ಎಂಬಾತನನ್ನು ಅಪಹರಿಸಿ, ಬೆದರಿಸಿ ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಬಂಧಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ನಗರದ ಈ ಭಾಗಗಳಲ್ಲಿ 2 ದಿನ  ವಿದ್ಯುತ್ ವ್ಯತ್ಯಯ 

Rowdy Sheeter ಘಟನೆ ವಿವರ

ಎಫ್​​ಐ ಆರ್​ನಲ್ಲಿ ಇರುವಂತೆ ದೂರುದಾರರಾದ ಇರ್ಫಾನ್ ಖಾನ್ ನ್ಯೂ ಮಂಂಡ್ಲಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಕಲಿಯುತ್ತಿದ್ದರು. ಮೇ 9ರಂದು ಮಧ್ಯಾಹ್ನ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಆದಿಲ್ ಭಾಯ್ ಕರೆಯುತ್ತಿದ್ದಾರೆ ಎಂದು ಹೇಳಿ ಇರ್ಫಾನ್‌ನನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಬೈಪಾಸ್​​​ನಿಂದ ಕಿಯಾ ಕಾರಿನಲ್ಲಿ ಕೂರಿಸಿಕೊಂಡು ಭದ್ರಾವತಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಂಧನದಲ್ಲಿರಿಸಿದ್ದಾರೆ

ನಂತರ ಸ್ಥಳಕ್ಕೆ ಫಾರ್ಚೂನರ್ ಕಾರಿನಲ್ಲಿ ಬಂದ ಆರೋಪಿ ಆದಿಲ್, ಇರ್ಫಾನ್‌ನನ್ನು ತರೀಕೆರೆ ರಸ್ತೆಗೆ ಕರೆದೊಯ್ದು ಮಾರಕಾಸ್ತ್ರ ತೋರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ನಿನ್ನ ಬಗ್ಗೆ ನನಗೆಲ್ಲಾ ಗೊತ್ತು, ಹಣ ಕೊಡದಿದ್ದರೆ ನಿನ್ನ ಹೆಣ ಬೀಳಿಸುತ್ತೇನೆ ಎಂದು ಬೆದರಿಸಿದ್ದಾನೆ. ಅಲ್ಲದೆ, ಆದಿಲ್ ಸಹಚರರು ಇರ್ಫಾನ್‌ನ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದು, ಚಾಕುವಿನಿಂದ ಇರಿಯಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರಾಣಭಯದಿಂದ ಇರ್ಫಾನ್ ತನ್ನ ಪತ್ನಿ ಮತ್ತು ಅಣ್ಣನಿಗೆ ಕರೆ ಮಾಡಿ ಅಕೌಂಟ್‌ನಲ್ಲಿದ್ದ 1 ಲಕ್ಷ ರೂಪಾಯಿಯನ್ನು ಆರೋಪಿಗಳು ಹೇಳಿದ ನಂಬರ್‌ಗೆ ವರ್ಗಾಯಿಸಿದ್ದಾರೆ. ಬಾಕಿ 4 ಲಕ್ಷ ರೂಪಾಯಿಯನ್ನು ಕೊಡದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಆರೋಪಿಗಳು ಬೆದರಿಸಿದ್ದು, ಈ ಹಿನ್ನೆಲೆ ಭಯಗೊಂಡ ದೂರುದಾರ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

Rowdy Sheeter Adil Kidnaps Mobile Shop Worker

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor