ಜರ್ಮನಿಯ ಎರ್ಲಾಂಗನ್‌ನಲ್ಲಿ ಮೇ 16ರಂದು ಅದ್ದೂರಿ ಯುರೋಪ್ ಬಸವ ಜಯಂತಿ ಸಮಾವೇಶ

ಹಂಚಿಕೊಳ್ಳಿ
WhatsApp Facebook X Telegram
Europe Basava Jayanti 2026 Grand Celebration
Europe Basava Jayanti 2026 Grand Celebration

Europe Basava Jayanti ಶಿವಮೊಗ್ಗ : ವಿಶ್ವಗುರು ಬಸವಣ್ಣನವರ ಸಮಾನತೆಯ ಸಂದೇಶವನ್ನು ಜಗತ್ತಿನಾದ್ಯಂತ ಪಸರಿಸಲು ಯುರೋಪ್ ಕನ್ನಡಿಗರು ಸಜ್ಜಾಗಿದ್ದಾರೆ. ಬಸವ ಸಮಿತಿ ಯುರೋಪ್ ವತಿಯಿಂದ ಎರಡನೇ ಬಸವ ಜಯಂತಿ ಸಮಾವೇಶವನ್ನು 2026ರ ಮೇ 16ರಂದು ಜರ್ಮನಿಯ ಎರ್ಲಾಂಗನ್ ನಗರದಲ್ಲಿ ಅತ್ಯಂತ ಸಡಗರದಿಂದ ಆಯೋಜಿಸಲಾಗಿದೆ.

ಶಿವಮೊಗ್ಗ: 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು 

ಎರ್ಲಾಂಗನ್‌ನ ಫ್ರೌನಾರಾಚ್ ಸಮುದಾಯ ಕೇಂದ್ರದಲ್ಲಿ ಅಂದು ಬೆಳಿಗ್ಗೆ 9:30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಯುರೋಪಿನ ವಿವಿಧ ಮೂಲೆಗಳಲ್ಲಿ ನೆಲೆಸಿರುವ ಬಸವ ಭಕ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 

ಈ ಸಮಾರಂಭದಲ್ಲಿ ಜರ್ಮನಿಯ ಭಾರತೀಯ ರಾಯಭಾರಿ ಅಜಿತ್ ವಿನಾಯಕ್ ಗುಪ್ತೆ, ಖ್ಯಾತ ಭಾರತ ಶಾಸ್ತ್ರಜ್ಞ ಪ್ರೊ. ಡಾ. ರಾಬರ್ಟ್ ಜೆ. ಝೈಡೆನ್‌ಬೋಸ್ ಸೇರಿದಂತೆ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಬಸವೇಶ್ವರರ ಭಾವಚಿತ್ರದ ಮೆರವಣಿಗೆಯೊಂದಿಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಹಾಗೂ ದಾಸೋಹ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. 

ಸಮಾವೇಶದ ವಿಶೇಷ ಆಕರ್ಷಣೆಯಾಗಿ ಮಕ್ಕಳಿಂದ ವಚನ ವಾಚನ, ಶಾಸ್ತ್ರೀಯ ನೃತ್ಯ ಮತ್ತು ವಚನ ಗಾಯನ ಕಾರ್ಯಕ್ರಮಗಳು ನಡೆಯಲಿವೆ. ವಿದೇಶಿ ಮಣ್ಣಿನಲ್ಲಿ ಕನ್ನಡದ ಕಂಪು ಹಾಗೂ ಶರಣರ ತತ್ವಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವದ ಹೆಜ್ಜೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Europe Basava Jayanti 2026 Grand Celebration

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor