ಇತ್ತ ಮದುವೆ ಹೆಸರಲ್ಲಿ ಸಂಬಂಧ! ಅತ್ತ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ! ಬಾಳೆಹೊನ್ನೂರಲ್ಲಿ ಹೊಸನಗರ ಕೇಸ್!

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್​ ಸ್ಟೇಷನ್​ ಲಿಮಿಟ್ಸ್​ನಲ್ಲಿ ಯುವತಿಯೊಬ್ಬಳಿಗೆ ಹೊಸನಗರ ತಾಲೂಕಿನ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಮದುವೆಯಾಗಲು ನಿರಾಕರಿಸಿ ವಂಚಿಸಿದ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಳೆಹೊನ್ನೂರಲ್ಲಿ ಹೊಸನಗರ ಕೇಸ್!

ಹೊಸನಗರ ತಾಲೂಕಿನ ಗ್ರಾಮವೊಂದರ ನಿವಾಸಿ ಸಂತ್ರಸ್ತ ಯುವತಿಗೆ 2014ನೇ ಸಾಲಿನಲ್ಲಿ ಪರಿಚಯವಾಗಿದ್ದು, ನಂತರ ಇಬ್ಬರಿಗೂ ಪ್ರೇಮಾಂಕುರವಾಗಿದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಹಲವಾರು ಬಾರಿ ಹೊರಗಡೆ ಕರೆದೊಯ್ದಿದ್ದಾನೆ. ಅಲ್ಲದೆ ಯುವತಿಯ ಮನೆಗೂ ಬಂದು ಆಕೆಯೊಂದಿಗೆ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇನ್ನೂ ಈ ಬಗ್ಗೆ ಯುವಕ, ಯುವತಿಯ ಗ್ರಾಮದ ಮನೆಯವರಿಗೂ ತಿಳಿದಿದೆ. ಆದರೆ ಇದೀಗ ಆರೋಪಿ ಸಚಿನ್ ಯುವತಿಗೆ ತಿಳಿಸದೆ ಗೌಪ್ಯವಾಗಿ ಮತ್ತೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇದರಿಂದ ನನಗೆ ಅನ್ಯಾಯವಾಗಿದ್ದು, ನಂಬಿಸಿ ಮದುವೆಯಾಗುವುದಾಗಿ ವಂಚನೆ ಮಾಡಿದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಂಚನೆಗೊಳಗಾದ ಯುವತಿ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಇತ್ತ ಮದುವೆ ಹೆಸರಲ್ಲಿ ಸಂಬಂಧ! ಅತ್ತ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ! ಬಾಳೆಹೊನ್ನೂರಲ್ಲಿ ಹೊಸನಗರ ಕೇಸ್!Youth Booked for Cheating Woman Under Pretext of Marriage in Balehonnur
ಇತ್ತ ಮದುವೆ ಹೆಸರಲ್ಲಿ ಸಂಬಂಧ! ಅತ್ತ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ! ಬಾಳೆಹೊನ್ನೂರಲ್ಲಿ ಕೇಸ್!Youth Booked for Cheating Woman Under Pretext of Marriage in Balehonnur