ಶಿವಮೊಗ್ಗ: ಕಲ್ಯಾಣ ಮಂಟಪದಲ್ಲಿ ಚಿನ್ನ ಕಳ್ಳತನ ಮಾಡಿದ್ದ ಖದೀಮರು ಕೇವಲ 6 ಗಂಟೆಯಲ್ಲಿ ಅರೆಸ್ಟ್!

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

Vinobanagar Police ಶಿವಮೊಗ್ಗ: ಮದುವೆ ಮನೆಯ ಸಂಭ್ರಮದ ನಡುವೆ ಅತಿಥಿಗಳ ಕೊಠಡಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಶಿವಮೊಗ್ಗದ ವಿನೋಬನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ದೂರು ದಾಖಲಾದ ಕೇವಲ 6 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ 

ಪ್ರಕರಣದ ಹಿನ್ನೆಲೆ

ಏಪ್ರಿಲ್ 30 ರಂದು ನಗರದ ನವುಲೆ ಬಳಿಯಿರುವ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಸದಾಶಿವಪ್ಪ ಎಂಬುವವರು ರೂಮ್‌ನಲ್ಲಿ ಬ್ಯಾಗ್‌ನಲ್ಲಿ ಇಟ್ಟಿದ್ದ ಸುಮಾರು 28 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳರು ದೋಚಿದ್ದರು. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಭೇಧಿಸಿಸಲು ವಿನೋಬನಗರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು, ನಂತರ ತಾಂತ್ರಿಕ ಮಾಹಿತಿ ಮತ್ತು ನೆಟ್‌ವರ್ಕ್ ಬಳಸಿಕಾರ್ಯಾಚರಣೆ ನಡೆಸಿದರು. ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಅಮ್ಜದ್ ಖಾನ್ @ ಅಂಜು (29 ವರ್ಷ) ಮತ್ತು ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. 

ಬಂಧಿತರಿಂದ ಕಳವು ಮಾಡಲಾಗಿದ್ದ 24 ಗ್ರಾಂ ಬಂಗಾರದ ಆಭರಣಗಳು (ಅಂದಾಜು ಮೌಲ್ಯ 3.75 ಲಕ್ಷ ರೂ.) ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಮಾಲಿನ ಮೌಲ್ಯ ಸುಮಾರು 5.85 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ.

Vinobanagar Police Crack Wedding Hall Theft Case

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor