SHIVAMOGGA NEWS TODAY

PUC  ಕಾಲೇಜಿಗೆ ಅಡ್ಮಿಷನ್ ಹೋಗ್ತಿದ್ದೀರಾ, ಹಾಗಾದ್ರೆ ಶಿಕ್ಷಣ ಇಲಾಖೆ ಕೊಟ್ಟಿರೋ ಈ ಎಚ್ಚರಿಕೆಯನ್ನೊಮ್ಮೆ ಓದಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Education Dept Warning ಶಿವಮೊಗ್ಗ: 2026-27 ನೇ ಸಾಲಿಗೆ ಪ್ರಥಮ ಪಿಯುಸಿಗೆ ದಾಖಲಾತಿ ಮಾಡುವಾಗ ಪೋಷಕರು ದಾಖಲಾತಿ ಮಾಡುವ ಕಾಲೇಜಿಗೆ ಸಂಬಂಧ ಪಟ್ಟಂತಹ ಕೆಲ ವಿಚಾರಗನ್ನು ಗಮನಿಸಿ ದಾಖಲಾತಿ ಮಾಡಬೇಕೆಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ.

ಶಿವಮೊಗ್ಗ ಹವಾಮಾನ ಮುನ್ಸೂಚನೆ: ಬಿರುಗಾಳಿ ಸಹಿತ ಮಳೆ ಸಾಧ್ಯತೆ

ಈ ಕುರಿತು  ಶಾಲಾ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಖಲಿಸುವಂತೆ ತಿಳಿಸಿದ್ದಾರೆ.

 ಜಿಲ್ಲೆಯ ಕೆಲವೊಂದು ಸಂಸ್ಥೆಯವರು ಹೊಸ ಕಾಲೇಜಿನ ಅನುಮತಿ ಪಡೆಯದೇ ಜಾಹಿರಾತುಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಕಾಲೇಜುಗಳ ಬಗ್ಗೆ ಪೋಷಕರು ಎಚ್ಚರ ವಹಿಸುವುದು. ಒಂದು ವೇಳೆ ಈ ಸಂಸ್ಥೆ/ ಕಾಲೇಜುಗಳು ಅನಧಿಕೃತವಾಗಿ ದಾಖಲಾತಿ ಮಾಡಿಕೊಂಡಲ್ಲಿ ಅವರ ಮೇಲೆ ಇಲಾಖಾ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಾಗುವುದು. ಪೋಷಕರಿಗೆ ಅನುಮಾನ ಬಂದರೆ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಬಿ.ಹೆಚ್ ರಸ್ತೆ ಶಿವಮೊಗ್ಗ ಇಲ್ಲಿಯ ಕಚೇರಿ ಸಮಯದಲ್ಲಿ ಬಂದು ವಿಚಾರಿಸುವಂತೆ ಅವರು ತಿಳಿಸಿದ್ದಾರೆ.

Education Dept Warning Check College Approval in Shimoga

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.