ವೈಶಾಖ ಮಾಸದ ದೈನಂದಿನ ಪಂಚಾಂಗ! ನಿಮ್ಮ ಇಂದಿನ ಭವಿಷ್ಯವೇನು ತಿಳಿಯಿರಿ!

ಹಂಚಿಕೊಳ್ಳಿ
WhatsApp Facebook X Telegram
ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
Panchanga and Daily Horoscope February 25, 2026 | February 25, 2026 ರ ಇಂದಿನ ಪಂಚಾಂಗ, ರಾಹುಕಾಲ, ಶುಭ ಮುಹೂರ್ತ ಮತ್ತು 12 ರಾಶಿಗಳ ಸಂಪೂರ್ಣ ದಿನ ಭವಿಷ್ಯ Daily Horoscope

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಕೃಷ್ಣ ಪಕ್ಷದ ತದಿಗೆ ತಿಥಿಯು ರಾತ್ರಿ 2.50 ರವರೆಗೆ ಇದ್ದು, ತದನಂತರ ಚೌತಿ ಆರಂಭವಾಗಲಿದೆ. ಅನುರಾಧ ನಕ್ಷತ್ರ ಬೆಳಿಗ್ಗೆ 8.04 ರವರೆಗೆ ಇದ್ದು, ಬಳಿಕ ಜ್ಯೇಷ್ಠಾ ನಕ್ಷತ್ರವಿರಲಿದೆ. ಅಮೃತ ಘಳಿಗೆಯು ರಾತ್ರಿ 12.56 ರಿಂದ 2.41 ರವರೆಗೆ ಒದಗಿಬರಲಿದೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಮತ್ತು ಯಮಗಂಡ ಕಾಲವು ಬೆಳಿಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ವೈಶಾಖ ಮಾಸದ ಈ ದಿನದ ಭವಿಷ್ಯ

ಮೇಷ / ಕೌಟುಂಬಿಕ ವಲಯದಲ್ಲಿ ಒತ್ತಡದ ಸನ್ನಿವೇಶ ಸಾಧ್ಯತೆಯಿದೆ. ದೈನಂದಿನ ಕಾರ್ಯಗಳು ವಿಳಂಬ. ಭಿನ್ನಾಭಿಪ್ರಾಯ ತಲೆದೋರಬಹುದು. ದೈಹಿಕ ಶ್ರಮ, ವಾಣಿಜ್ಯ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ , ಉದ್ಯೋಗದಲ್ಲಿ ಕೆಲವು ಅನಿರೀಕ್ಷಿತ ಅಡಚಣೆ ಎದುರಿಸಬೇಕಾಗಿ ಬರಬಹುದು.

ವೃಷಭ / ಪ್ರಯತ್ನಗಳಿಗೆ ಉತ್ತಮ ಫಲ, ಹೊಸ ಅವಕಾಶ ಒದಗಿಬರಲಿವೆ. ಅಂದುಕೊಂಡ ಕೆಲಸ ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ವ್ಯಾಪಾರ ಹಾಗೂ ವಹಿವಾಟು ಲಾಭದಾಯಕವಾಗಿ ಸಾಗಲಿವೆ. ಉದ್ಯೋಗಸ್ಥರಿಗೆ ನೂತನ ಜವಾಬ್ದಾರಿ .

ಮಿಥುನ / ಮಂಗಳ ಕಾರ್ಯ, ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ , ನೂತನ ವಸ್ತು ಹಾಗೂ ವಸ್ತ್ರ ಖರೀದಿಸುವ ಯೋಗವಿದೆ. ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯಶಸ್ಸು , ನೌಕರಿ ಮಾಡುವ ಸ್ಥಳದಲ್ಲಿ ಕೆಲಸದ ಒತ್ತಡ ಕಡಿಮೆಯಾಗಲಿದೆ.

ಕರ್ಕಾಟಕ / ಅನಿರೀಕ್ಷಿತ ಅಡಚಣೆ. ಬಂಧುಗಳು ಮತ್ತು ಸ್ನೇಹಿತರೊಂದಿಗೆ ಸಣ್ಣಪುಟ್ಟ ವಿಚಾರಗಳಿಗಾಗಿ ಮನಸ್ತಾಪ ಉಂಟಾಗಬಹುದು. ದೂರ ಪ್ರಯಾಣ , ನೆಮ್ಮದಿ ಕದಡುವಂತಹ ಘಟನೆ ಜರುಗಬಹುದು. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಲೆಕ್ಕಾಚಾರ ತಪ್ಪುವ ಸಾಧ್ಯತೆ

ಸಿಂಹ / ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಮನಸ್ಸಿನ ಆಲೋಚನೆಗಳಲ್ಲಿ ಅಸ್ಥಿರತೆ ಕಾಡಲಿದೆ. ಭಿನ್ನಾಭಿಪ್ರಾಯ, ಅನಾರೋಗ್ಯ, ದೈಹಿಕ ಶ್ರಮ ದುಪ್ಪಟ್ಟಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕೆಲಸದ ಒತ್ತಡ .

ಕನ್ಯಾ / ಕೆಲಸ ಕಾರ್ಯಗಳು ವಿಘ್ನವಿಲ್ಲದೆ ಸುಗಮವಾಗಿ ಸಾಗಲಿವೆ. ಉತ್ತಮ ಬಾಂಧವ್ಯ ವೃದ್ಧಿಯಾಗಲಿದೆ. ನೂತನ ವಾಹನ ಖರೀದಿಸುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ಅವಕಾಶ ಒದಗಿಬರಲಿವೆ. ವಾಣಿಜ್ಯ ವಹಿವಾಟು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣಬಹುದಾಗಿದೆ.

ತುಲಾ / ಹೊಂದಾಣಿಕೆಯ ಕೊರತೆ ಎದುರಿಸಬೇಕಾಗುತ್ತದೆ. ಹಣಕಾಸಿನ ವಹಿವಾಟುಗಳಲ್ಲಿ ನಿರೀಕ್ಷಿತ ಫಲಿತಾಂಶ, ಕಾರ್ಯಕ್ಷೇತ್ರದಲ್ಲಿ ದೈಹಿಕ ಮತ್ತು ಮಾನಸಿಕ ಶ್ರಮ ಹೆಚ್ಚಾಗಲಿದೆ. ದೂರ ಪ್ರಯಾಣ , ವ್ಯಾಪಾರ ಹಾಗೂ ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿ ಹೊರೆ ಹೆಚ್ಚಾಗಬಹುದು.

ವೃಶ್ಚಿಕ / ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ. ಸಮಾಜದಲ್ಲಿ ಹೊಸ ವ್ಯಕ್ತಿಗಳ ಪರಿಚಯ. ಸ್ಥಿರಾಸ್ತಿ ಖರೀದಿ ವಾಹನ ಯೋಗ . ಹಳೆಯ ಸ್ನೇಹಿತರ ಅನಿರೀಕ್ಷಿತ ಭೇಟಿ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ಧನುಸ್ಸು / ಒತ್ತಡವನ್ನು ಎದುರಿಸಬೇಕಾಗಿ ಬರಬಹುದು. ಮನಸ್ಸು ಆಧ್ಯಾತ್ಮಿಕ ವಿಚಾರಗಳತ್ತ ವಾಲಲಿದ್ದು, ದೇವರ ಧ್ಯಾನದಲ್ಲಿ ಆಸಕ್ತಿ ಮೂಡಲಿದೆ. ನಿತ್ಯದ ವ್ಯವಹಾರಗಳಲ್ಲಿ ಸಣ್ಣಪುಟ್ಟ ತೊಡಕು ಎದುರಾಗುವ ಸಂಭವವಿದೆ. ಉತ್ಸಾಹದ ಕೊರತೆ ಎದ್ದು ಕಾಣಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಕೆಲವು ಸಣ್ಣ ಬದಲಾವಣೆ ನಿರೀಕ್ಷಿಸಬಹುದಾಗಿದೆ.

ಮಕರ / ಶುಭ ಕಾರ್ಯಗಳ ನಿಮಿತ್ತ ಹಣಕಾಸಿನ ಖರ್ಚು ಹೆಚ್ಚಾಗಲಿದೆ. ಹೊಸಬರ ಪರಿಚಯವಾಗಲಿದೆ. ಪುಣ್ಯ ಕ್ಷೇತ್ರಗಳಿಗೆ ಹಾಗೂ ದೇವಾಲಯಗಳಿಗೆ ಭೇಟಿ . ವ್ಯಾಪಾರ ಹಾಗೂ ನೌಕರಿ ಕ್ಷೇತ್ರದಲ್ಲಿ ಇದುವರೆಗೆ ಇದ್ದಂತಹ ಅಡೆತಡೆಗಳು ನಿವಾರಣೆಯಾಗಲಿವೆ.

ಕುಂಭ / ಧನ ಸಹಾಯ ಒದಗಿಬರುವ ಯೋಗವಿದೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿಯಾಗಲಿದ್ದು, ವಿಶೇಷ ಗೌರವ ಪ್ರಾಪ್ತಿಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಕೆಲವು ಕಠಿಣ ಹಾಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಲಾಭ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ.

ಮೀನ / ಎಚ್ಚರಿಕೆ ಅಗತ್ಯ. ಅನಗತ್ಯ ವಿಚಾರಗಳಿಗೆ ಹಣ ಖರ್ಚಾಗಲಿದೆ. ಮನೆಯ ಸದಸ್ಯರೊಡನೆ ಭಿನ್ನಾಭಿಪ್ರಾಯ ಮೂಡಿ ನೆಮ್ಮದಿ ಹಾಳಾಗಬಹುದು. ಹಣಕಾಸಿನ ಮುಗ್ಗಟ್ಟು . ಆರೋಗ್ಯದ ಸಮಸ್ಯೆ ಬಾಧಿಸಬಹುದಾಗಿದ್ದು, ಎಚ್ಚರದಿಂದಿರಬೇಕು. ವ್ಯಾಪಾರ ಹಾಗೂ ಉದ್ಯೋಗ ಸ್ಥಳದಲ್ಲಿ ಸಾಮಾನ್ಯ ವಾತಾವರಣ!

ವೈಶಾಖ ಮಾಸದ ದೈನಂದಿನ ಪಂಚಾಂಗ! ನಿಮ್ಮ ಇಂದಿನ ಭವಿಷ್ಯವೇನು ತಿಳಿಯಿರಿ! Daily Horoscope and Panchanga Complete Astrology Predictions for All Zodiac Signs
ವೈಶಾಖ ಮಾಸದ ದೈನಂದಿನ ಪಂಚಾಂಗ! ನಿಮ್ಮ ಇಂದಿನ ಭವಿಷ್ಯವೇನು ತಿಳಿಯಿರಿ! Daily Horoscope and Panchanga Complete Astrology Predictions for All Zodiac Signs

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor