ಮೇಷ ಸಂಕ್ರಮಣ : ವಿಶೇಷ ದಿನದ ದಿನಭವಿಷ್ಯ ಮತ್ತು ದಿನದ ಪಂಚಾಂಗದ ವಿವರ

ಪರಾಭವ ನಾಮ ಸಂವತ್ಸರದ, ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ದ್ವಾದಶಿ ತಿಥಿಯು ರಾತ್ರಿ 9.12 ರವರೆಗೆ ಇರಲಿದ್ದು, ತದನಂತರ ತ್ರಯೋದಶಿ ಆರಂಭವಾಗಲಿದೆ. ಶತಭಿಷ ನಕ್ಷತ್ರವು ಮಧ್ಯಾಹ್ನ 1.18 ರವರೆಗೆ ಇರುತ್ತದೆ, ಬಳಿಕ ಪೂರ್ವಭಾದ್ರ ನಕ್ಷತ್ರ ಪ್ರವೇಶ ಮಾಡಲಿದೆ. ಬೆಳಿಗ್ಗೆ 5.56 ರಿಂದ 7.34 ರವರೆಗೆ ಮತ್ತು ಮರುದಿನದ ಮುಂಜಾನೆ 5.18 ರಿಂದ 6.54 ರವರೆಗೆ ಅಮೃತ ಗಳಿಗೆಯ ಸಮಯವಾಗಿದೆ. ಈ ದಿನ ಮೇಷ ಸಂಕ್ರಮಣದ ವಿಶೇಷವೂ ಇದೆ. ಮಧ್ಯಾಹ್ನ 3.00 ರಿಂದ 4.30 ರವರೆಗೆ ರಾಹುಕಾಲ ಮತ್ತು ಬೆಳಿಗ್ಗೆ 9.00 ರಿಂದ 10.30 ರವರೆಗೆ ಯಮಗಂಡ ಕಾಲ ಇರುತ್ತದೆ.

ಮೇಷ ಸಂಕ್ರಮಣದ ದಿನಭವಿಷ್ಯ

ಮೇಷ | ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಶುಭ ಕಾರ್ಯ. ದೇವಸ್ಥಾನಗಳಿಗೆ ಭೇಟಿ , ಶೈಕ್ಷಣಿಕ ವಲಯದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ವ್ಯಾಪಾರ ಮತ್ತು ವಹಿವಾಟುಗಳು ಅತ್ಯಂತ ಹೆಚ್ಚಿನ ಲಾಭ ತಂದುಕೊಡಲಿವೆ ಹಾಗೂ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿ ಸಿಗುವ ನಿರೀಕ್ಷೆಯಿದೆ.

ವೃಷಭ |ದೂರದ ಸಂಬಂಧಿಗಳ ಭೇಟಿ, ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕೈಗೊಂಡ ಕಾರ್ಯಗಳಲ್ಲಿ ವಿಜಯಶಾಲಿಯಾಗಲಿದ್ದು, ಸ್ಥಿರಾಸ್ತಿಗೆ ಸಂಬಂಧಿಸಿದ ಹಳೆಯ ವಿವಾದ ಬಗೆಹರಿಯಲಿವೆ. ವೃತ್ತಿಪರ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಅತ್ಯುತ್ಸಾಹದ ವಾತಾವರಣ ನೆಲೆಸಲಿದೆ.

ಮಿಥುನ | ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ದೂರ ಪ್ರಯಾಣ . ಮನೆಯೊಳಗೆ ಮತ್ತು ಹೊರಗೆ ಸಣ್ಣಪುಟ್ಟ ಕಿರಿಕಿರಿ ಎದುರಾಗಲಿದ್ದು, ಉದ್ಯೋಗ ಹಾಗೂ ವ್ಯವಹಾರದಲ್ಲಿ ಈ ದಿನ ಸಾಮಾನ್ಯದಿನ

ಕರ್ಕಾಟಕ | ದೈನಂದಿನ ಕಾರ್ಯಗಳಲ್ಲಿ ಅಡೆತಡೆ, ಆದಾಯಕ್ಕಿಂತ ಖರ್ಚಿನ ಪ್ರಮಾಣ ಜಾಸ್ತಿ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ . ಅನಿರೀಕ್ಷಿತ ಪ್ರಯಾಣ, ಉದ್ಯೋಗ ಮತ್ತು ವ್ಯಾಪಾರವು ಸಾಧಾರಣ ಗತಿಯಲ್ಲಿ ಸಾಗಲಿದೆ.

ಸಿಂಹ |ಹೊಸ ಜನರ ಪರಿಚಯವಾಗಲಿದ್ದು, ಅತ್ಯಂತ ಸಂತೋಷದ ಸುದ್ದಿಗಳು ಕಿವಿಗೆ ಬೀಳಲಿವೆ. ವಾಹನ ಹಾಗೂ ನೂತನ ಭೂಮಿ ಖರೀದಿಯ ಯೋಗವಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಚಿಮ್ಮಲಿದೆ. ಉದ್ಯೋಗ ವ್ಯಾಪಾರ ರಂಗಗಳಲ್ಲಿ ಪ್ರಗತಿಯತ್ತ ದಿಟ್ಟ ಹೆಜ್ಜೆ ಹಾಕಲಿದ್ದಾರೆ.

ಕನ್ಯಾ |ಸಾಮಾಜಿಕ ಪ್ರಭಾವ ವೃದ್ಧಿಯಾಗಲಿದ್ದು, ಕೈಗೊಂಡ ಕೆಲಸಗಳಲ್ಲಿ ನಿಶ್ಚಿತ ಜಯ ಸಿಗಲಿದೆ. ಬಂಧುಮಿತ್ರರಿಂದ ಅಗತ್ಯ ನೆರವು ದೊರೆಯಲಿದ್ದು, ವಸ್ತು ರೂಪದ ಲಾಭವಾಗಲಿದೆ. ಉದ್ಯೋಗ ಹಾಗೂ ವ್ಯಾಪಾರ ಜೀವನದಲ್ಲಿ ಮುಂದಡಿ ಇಡಲಿದ್ದಾರೆ.

ತುಲಾ |ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗಬಹುದು. ನಿಗದಿತ ಪ್ರಯಾಣದ ಯೋಜನೆಗಳಲ್ಲಿ ಬದಲಾವಣೆಗಳು ಆಗಲಿವೆ. ಅನಾರೋಗ್ಯ, ಹೆಚ್ಚಿನ ಶ್ರಮ ಕೆಲವು ಮಹತ್ವದ ಕಾರ್ಯಕ್ರಮಗಳು ಮುಂದೂಡಲ್ಪಡಲಿದ್ದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಕೊಂಚ ಹಿನ್ನಡೆಯ ಅನುಭವವಾಗಬಹುದು.

ವೃಶ್ಚಿಕ |ದೈನಂದಿನ ಕೆಲಸಗಳ ವೇಗ ತಗ್ಗಲಿದೆ. ಹಣಕಾಸಿನ ವಹಿವಾಟುಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರಲಿದ್ದು, ಶ್ರಮ ಹಾಗೂ ಖರ್ಚು ಎರಡೂ ಅಧಿಕವಾಗಲಿದೆ, ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸ್ಥಿರತೆ ಇರುವುದಿಲ್ಲ. ಉದ್ಯೋಗ ಜೀವನ ಮತ್ತು ವ್ಯಾಪಾರವು ಎಂದಿನಂತೆ ಸಾಮಾನ್ಯವಾಗಿರಲಿದೆ.

ಧನುಸ್ಸು | ಪ್ರಮುಖ ಮಾಹಿತಿಗಳು ಲಭ್ಯವಾಗಲಿವೆ. ಮಹತ್ವದ ನಿರ್ಧಾರ ಕೈಗೊಳ್ಳಲಿದ್ದು, ನಿರೀಕ್ಷಿತ ಕಾರ್ಯ ಸಿದ್ಧಿಯಾಗಲಿದೆ. ಕೆಲವು ಹಳೆಯ ವಿವಾದ ಸುಖಾಂತ್ಯ ಕಾಣಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಎದುರಾಗಿದ್ದ ಬಹುತೇಕ ಅಡೆತಡೆ ನಿವಾರಣೆಯಾಗಲಿವೆ.

ಮೇಷ ಸಂಕ್ರಮಣದ ದಿನಭವಿಷ್ಯ

ಮಕರ |ದೈನಂದಿನ ವ್ಯವಹಾರಗಳಲ್ಲಿ ಹಲವು ತೊಡಕು ಎದುರಾಗುವ ಸಂಭವವಿದೆ. ಖರ್ಚು ವೆಚ್ಚ ಮಿತಿ ಮೀರಲಿದ್ದು, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆ ಗೋಚರಿಸಲಿವೆ.

ಕುಂಭ |ಅತ್ಯಂತ ಉತ್ಸಾಹದಿಂದ ಸಮಯ ಕಳೆಯಲಿದ್ದಾರೆ. ಬರಬೇಕಿದ್ದ ಹಳೆಯ ಬಾಕಿ ಹಣ ಸುಲಭವಾಗಿ ಕೈಸೇರಲಿದೆ. ದೇವಸ್ಥಾನಗಳಿಗೆ ಭೇಟಿ, ಉದ್ಯೋಗ ಹಾಗೂ ವ್ಯಾಪಾರ ಅನುಕೂಲಕರವಾಗಿರಲಿದೆ.

ಮೀನ | ದಿಢೀರ್ ಪ್ರಯಾಣ, ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ಅನಾರೋಗ್ಯ. ಆಧ್ಯಾತ್ಮಿಕ ಚಿಂತನೆಗಳಲ್ಲಿ ಮನಸ್ಸು ನೆಲೆಸಲಿದ್ದು, ಉದ್ಯೋಗ ಹಾಗೂ ವ್ಯವಹಾರದಲ್ಲಿ ಕೆಲವು ಅಡೆತಡೆ ಎದುರಿಸಬೇಕಾಗುತ್ತದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Todays Panchangam and Horoscope Daily Astrology for All Zodiac Signs  ಮೇಷ ಸಂಕ್ರಮಣದ ಈ ದಿನ ವಿಶೇಷವೂ ಸೇರಿದಂಥೆ  ದೈನಂದಿನ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಭವಿಷ್ಯ
Todays Panchangam and Horoscope Daily Astrology for All Zodiac Signs ಮೇಷ ಸಂಕ್ರಮಣದ ಈ ದಿನ ವಿಶೇಷವೂ ಸೇರಿದಂಥೆ  ದೈನಂದಿನ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಭವಿಷ್ಯ