WILDLIFE

ಡಾ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡಿತ್ತಿದ್ದ ನಿರಾನೆ ಸ್ಥಿತಿಯು ಗಂಭೀರ…

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಡಾಕ್ಡರ್ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡುತ್ತಿದ್ದ ಹುಲಿ ಸಿಂಹದಾಮದ ನೀರಾನೆ ಹಂಸಿನಿ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಕ್ಕಿದೆ..

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿರುವ 12 ವರ್ಷದ ‘ಹಂಸಿಣಿ’ ಎಂಬ ಹೆಸರಿನ ಹೆಣ್ಣು ಹಿಪ್ಪೋಪೋಟಾಮಸ್‌ನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದೆ. ಕಳೆದ ಕೆಲವು ದಿನಗಳಿಂದ ಹಂಸಿಣಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡಿತ್ತಿದ್ದ ನಿರಾನೆ

ಅನಾರೋಗ್ಯಕ್ಕೀಡಾಗಿದ್ದ ಹಿಪ್ಪೋಪೋಟಾಮಸ್‌ಗೆ ಏಪ್ರಿಲ್ 10 ರಂದು ಪಶುವೈದ್ಯರ ತಂಡ ಅರವಳಿಕೆ ಮದ್ದು ನೀಡಿ, ಆರೋಗ್ಯ ತಪಾಸಣೆ ನಡೆಸಿತ್ತು. ರಕ್ತ ಹಾಗೂ ಇತರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿಗಳ ಆಧಾರದ ಮೇಲೆ, ಹಂಸಿಣಿಯ ಗರ್ಭಕೋಶದಲ್ಲಿ ತೀವ್ರವಾದ ಸೋಂಕು ಉಂಟಾಗಿದ್ದು, ಇದರಿಂದ ದೇಹದ ಇತರೆ ಅಂಗಾಂಗಗಳಿಗೂ ಹಾನಿಯಾಗಿದೆ ಎಂಬುದು ದೃಢಪಟ್ಟಿದೆ.

ಡಾ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡಿತ್ತಿದ್ದ ನಿರಾನೆ
ಡಾ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡಿತ್ತಿದ್ದ ನಿರಾನೆ

​ಗರ್ಭಕೋಶದ ಸೋಂಕಿಗೆ ಗರ್ಭದಲ್ಲಿದ್ದ ಮರಿಯು ಮೃತಪಟ್ಟಿರುವುದೇ ಕಾರಣವಾಗಿರಬಹುದು ಎಂದು ಪಶುವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬಹುಅಂಗಾಂಗ ಸೋಂಕು ಹಾಗೂ ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿರುವ ಹಂಸಿಣಿಯ ಸ್ಥಿತಿ ಚಿಂತಾಜನಕವಾಗಿದೆ. ಮೃಗಾಲಯದ ವತಿಯಿಂದ ಆಕೆಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆ ಮತ್ತು ಸೂಕ್ತ ಲಾಲನೆ-ಪಾಲನೆ ಒದಗಿಸಲಾಗುತ್ತಿದೆ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ