SHIVAMOGGA NEWS TODAY

ನನಗೆ ತಾಯಿ ಇಲ್ಲ…ನನ್ನ ಹೆಸರಲ್ಲಿ ದೀಪ ಹಚ್ಚಿ ಭಾವುಕರಾದ ಬಿ.ಎಸ್. ಯಡಿಯೂರಪ್ಪ

[email protected] ನವೀಕರಣ: 04 ಮೇ 2026, 7:09 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ನನಗೆ ತಾಯಿ ಇಲ್ಲ…ನನ್ನ ಹೆಸರಲ್ಲಿ ದೀಪ ಹಚ್ಚಿ ಭಾವುಕರಾದ ಬಿ.ಎಸ್. ಯಡಿಯೂರಪ್ಪ

​ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ /​ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಹಳೆಯ ಹೋರಾಟದ ದಿನಗಳನ್ನು ಹಾಗೂ ಬಾಲ್ಯದ ಕಹಿ ಘಟನೆಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಮೆಲುಕು ಹಾಕುವ ಮೂಲಕ ಭಾವುಕರಾಗಿದ್ದರು..ಆ ದಿನಗಳ ವಿಡಿಯೋವೊಂದನ್ನು ಇಲ್ಲಿ ಪೋಸ್ಟ್ ಮಾಡಿದ್ದೇವೆ….ಸುಮಾರು  ವರ್ಷಗಳ ಕೆಳಗೆ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಬಿ ಎಸ್ ವೈ, ತಮ್ಮ ಹಿಂದಿನ ದಿನಗಳ ಹೋರಾಟಗಳನ್ನು ನೆನಪು ಮಾಡಿಕೊಂಡರೆ ತಮ್ಮ ಕಣ್ಣಿನಲ್ಲಿ ನೀರು ಬರುತ್ತದೆ ಎಂದು ಗುರುಮೂರ್ತಿ ಅವರ ಬಳಿ ಹೇಳಿಕೊಂಡಿದ್ದಾಗಿ ತಿಳಿಸಿದ್ದರು.. ಆ ದಿನಗಳ ವಿಡಿಯೋದಲ್ಲಿ ಇನ್ನಷ್ಟು ಸಂಗತಿಗಳಿವೆ…

ತಾವು ಮಾಡಿದ ಹೋರಾಟಗಳನ್ನು ಗುರುತಿಸಿ, ಜನರು ನೀಡುತ್ತಿರುವ ಅಪಾರ ಪ್ರೀತಿ ತಮಗೆ ಸಮಾಧಾನ ತಂದಿದೆ 

​ಶಿಕಾರಿಪುರವು ಇಡೀ ಕರ್ನಾಟಕ ರಾಜ್ಯಕ್ಕೆ ಒಂದು ಮಾದರಿ ನಾಡಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ತಮಗೆ ಅವಕಾಶ ಮಾಡಿಕೊಟ್ಟಿದೆ. ಯಾರು ಯಾರ ಮನೆಗೆ ಹೋದರೂ ಕೇಳುವಂತಹ ಒಂದು ವಾತಾವರಣವನ್ನು ಸೃಷ್ಟಿ ಮಾಡಿದ್ದಲ್ಲಿ, ಈ ನಾಡು ಮಾದರಿ ನಾಡಾಗಲು ಸಾಧ್ಯವಿದೆ ಮತ್ತು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಿಂತ ದೊಡ್ಡ ಭಾಗ್ಯ ಜೀವನದಲ್ಲಿ ತಮಗೆ ಬೇರೊಂದಿಲ್ಲ . ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದೆ. ಇಂದು ರಾಜ್ಯದ ಲಕ್ಷಾಂತರ ತಾಯಂದಿರು ತಮ್ಮನ್ನು ಸ್ವಂತ ಮಗನಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ. ಆ ತಾಯಂದಿರು ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಯಡಿಯೂರಪ್ಪ ಅವರಿಗೂ ಒಳ್ಳೆಯದಾಗಲಿ ಎಂದು ಒಂದು ದೀಪ ಹಚ್ಚಿ ಆಶೀರ್ವಾದ ಮಾಡಿದರೆ, ಅದುವೇ ತಮಗೆ ಸಿಗುವ ಅತಿದೊಡ್ಡ ರಕ್ಷಣೆ. ತಾಯಿಯನ್ನು ಕಳೆದುಕೊಂಡ ನೋವು ತಮಗಿಲ್ಲ, ಏಕೆಂದರೆ ಲಕ್ಷಾಂತರ ತಾಯಂದಿರು ಆ ಸ್ಥಾನವನ್ನು ತುಂಬಿದ್ದಾರೆ ಮತ್ತು ಇದಕ್ಕಿಂತ ಮಿಗಿಲಾದದ್ದು ಜೀವನದಲ್ಲಿ ಇನ್ನೇನೂ ಬೇಕಿಲ್ಲ ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು…ವಿಡಿಯೋ ನೋಡಿ ..

#BSYediyurappa #KarnatakaPolitics #Shikaripura #KannadaNews #EmotionalSpeech #BSY #KarnatakaLeaders #YouTubeKannada

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು: