ಸಚಿವ ಸಂಪುಟ & ಹೊಸ ಅವಕಾಶ : ಸಚಿವ ಬೈರತಿ ಸುರೇಶ್​

ಕೊನೆಯ ನವೀಕರಣ: 02 ಮೇ 2026, 4:31 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಸಚಿವ ಸಂಪುಟ & ಹೊಸ ಅವಕಾಶ : ಸಚಿವ ಬೈರತಿ ಸುರೇಶ್​

ಸಚಿವ ಸಂಪುಟ & ಹೊಸ ಅವಕಾಶ : ಸಚಿವ ಬೈರತಿ ಸುರೇಶ್​

ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್‌ರಚನೆಯ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ , ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಕಾಂಗ್ರೆಸ್ ಪಕ್ಷವು ನಮಗೆ ಅಧಿಕಾರದಲ್ಲಿರುವಂತೆ ಆದೇಶ ನೀಡಿದೆ. ನಾವು ಎಷ್ಟು ದಿನಗಳ ಕಾಲ ಅಧಿಕಾರದಲ್ಲಿ ಇರುತ್ತೇವೆಯೋ ಅಷ್ಟು ದಿನ ಜನಪರವಾದ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ಒಂದು ವೇಳೆ ಸಚಿವ ಸಂಪುಟ ಬದಲಾವಣೆಯಾದರೆ ಅದು ಒಳ್ಳೆಯ ಬೆಳವಣಿಗೆಯೇ ಆಗಿದೆ. ಹೊಸಬರಿಗೂ ಅವಕಾಶ ಸಿಗುವುದು ಅತ್ಯುತ್ತಮವಾದ ವಿಚಾರವಲ್ಲವೇ ಎಂದು ಭೈರತಿ ಸುರೇಶ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ಸರ್ವೇಜನ ಸುಖಿನೋಭವಂತು ಎಂಬ ಉದಾತ್ತ ತತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ. ಶಾಸಕರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ಹಾಗೂ ಅನುದಾನ ತಲುಪಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.

BS Suresh in Shivamogga, MLA SN Channabasappa, Karnataka Politics, Shivamogga News, Minister BS Suresh, Political Conversation, #ShivamoggaPolitics #BSSuresh #SNChannabasappa #DevelopmentPolitics #Bommanakatte #ShivamoggaUpdates #PoliticalCamaraderie #Trend #ViralPolitics

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor