ಕಳ್ಳತನಕ್ಕೆ ಪ್ರೇರಣೆಯಾಯಿತೇ ಅಂಗಡಿ ರಜಾ ಫಲಕ?

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಕಾರ್ಗಲ್: ಪ್ರವಾಸಕ್ಕೆಂದು ಹೋಗುವ ಮುನ್ನ ಅಂಗಡಿಯ ಮುಂದೆ ಹಾಕಿದ್ದ ರಜೆ ಫಲಕವೇ ಮಾಲೀಕರಿಗೆ ಮುಳುವಾದ ಘಟನೆ ಜೋಗದ ಯೂತ್ ಹಾಸ್ಟೆಲ್ ಬಳಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.

ತೀರ್ಥಹಳ್ಳಿಯ ಶಾರೀಖ್​ಗೆ 10 ವರ್ಷ ಜೈಲು! ಶಿವಮೊಗ್ಗ ಜೈಲಿಗೆ ವರ್ಗಾವಣೆ ಕೇಳಿದ್ದಕ್ಕೆ ಕೋರ್ಟ್ ನಕಾರ

ಘಟನೆಯ ವಿವರ 

ಸ್ಥಳೀಯ ನಿವಾಸಿ ವಿ.ಕೆ. ಉಮ್ಮರ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 21ರಂದು ಗೋವಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ಹೋಗುವ ಮುನ್ನ ಜೋಗದ ಬಜಾರ್ ಲೈನ್‌ನಲ್ಲಿರುವ ತಮ್ಮ ಅಂಗಡಿಯ ಮುಂದೆ 4 ದಿನ ರಜಾ ಇರುತ್ತದೆ ಎಂಬ ಫಲಕವನ್ನು ನೇತುಹಾಕಿದ್ದರು. ಇದನ್ನೇ ಗಮನಿಸಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೈಚಳಕ ತೋರಿದ್ದಾರೆ. 

ಲಕ್ಷಾಂತರ ಮೌಲ್ಯದ ದೋಚಿದ ಖದೀಮರು ಏಪ್ರಿಲ್ 26ರಂದು ಕುಟುಂಬವು ಪ್ರವಾಸ ಮುಗಿಸಿ ಹಿಂತಿರುಗಿದಾಗ ಮನೆಯ ಮುಂಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಮನೆಯ ಒಳಗಿದ್ದ ಅಲ್ಮೇರಾವನ್ನು ಒಡೆದ ಕಳ್ಳರು, ಸುಮಾರು 22 ಗ್ರಾಂ ತೂಕದ ಚಿನ್ನದ ಸರ ಹಾಗೂ 90,000 ರೂಪಾಯಿ ನಗದನ್ನು ಅಪಹರಿಸಿದ್ದಾರೆ. ಒಟ್ಟು ನಷ್ಟದ ಮೌಲ್ಯ ಲಕ್ಷಾಂತರ ರೂಪಾಯಿಗಳೆಂದು ಅಂದಾಜಿಸಲಾಗಿದೆ. 

ಘಟನಾ ಸ್ಥಳಕ್ಕೆ ಕಾರ್ಗಲ್ ಪಿಎಸ್‌ಐ ನಾಗರಾಜು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರವಾಸಕ್ಕೆ ತೆರಳುವಾಗ ಸಾರ್ವಜನಿಕವಾಗಿ ಮಾಹಿತಿ ನೀಡುವ ಫಲಕಗಳ ಬಗ್ಗೆ ಎಚ್ಚರವಿರಲಿ ಎಂದು ಈ ಘಟನೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸದ್ಯ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Kargal Robbery Store Holiday Board Alerts Thieves

Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Kargal Robbery

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor