ಸಾವಿನ ಮನೆಯಲ್ಲಿ ಮಾನವೀಯತೆ ಮೆರೆದ ಸಂಸದ : ಸಂಸ್ಕಾರಕ್ಕೆ ಆರ್ಥಿಕ ನೆರವು, ಕುಟುಂಬಕ್ಕೆ ಸಾಂತ್ವನ
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಮನೆ ಯಜಮಾನನ ಸಾವಿನಿಂದಾಗಿ ದುಃಖತಪ್ತವಾಗಿದ್ದ ಕುಟುಂಬವೊಂದಕ್ಕೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರರವರು , ಮೃತರ ಅಂತ್ಯಸಂಸ್ಕಾರಕ್ಕೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಷ್ಟೆ ಅಲ್ಲದೆ ಸಾವಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕ್ರಿಯೆಗಳ ಬಗ್ಗೆ ಮಾತನಾಡುವುದಾಗಿ ಕುಟುಂಬದ ಹೆಣ್ಣುಮಗಳಿಗೆ ಭರವಸೆ ನೀಡಿದರು.
ಮೃತರ ಪುತ್ರಿಗೆ ನಗದು ಹಣವನ್ನು ಹಸ್ತಾಂತರಿಸಿದ ನಾಯಕರು, ಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದಂತೆ ಕಿವಿಮಾತು ಹೇಳಿದರು. ಈ ವೇಳೆ ಮೃತರ ಪುತ್ರಿ ಧನ್ಯವಾದ ತಿಳಿಸಿದ್ದಿಕ್ಕೆ ಅದರಲ್ಲಿ ಏನಿದೆ ಅಮ್ಮಾ ದನ್ಯವಾದ ಹೇಳೋದಕ್ಕೆ ಇದೊಂದು ಮಾನವೀಯತೆ ಅಷ್ಟೆ ಎಂದು ಸಂಸದರು ಹೇಳಿದ್ದು ನೆರದವರವನ್ನು ಭಾವುಕರನ್ನಾಗಿಸಿತು. ಇನ್ನೂ ಮೃತರ ಸಾವಿನ ವಿಚಾರದಲ್ಲಿ ಪೊಲೀಸ್ ಪ್ರಕ್ರಿಯೆಗಳು ಪೂರ್ಣಗೊಂಡಿವೆಯೇ ಎಂಬ ಬಗ್ಗೆಯೂ ಅವರು ಸ್ಥಳದಲ್ಲಿದ್ದವರಿಂದ ಮಾಹಿತಿಯನ್ನು ಪಡೆದುಕೊಂಡರು. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಿ, ಸಂಸ್ಕಾರದ ಕಾರ್ಯಗಳನ್ನು ಪೂರೈಸುವಂತೆ ತಿಳಿಸಿದ ಅವರು, ತಾವು ಮತ್ತೆ ಬಂದು ಭೇಟಿಯಾಗುವುದಾಗಿ ಭರವಸೆ ನೀಡಿ ಅಲ್ಲಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಹಲವಾರು ಸ್ಥಳೀಯರು ಉಪಸ್ಥಿತರಿದ್ದು, ನಾಯಕರ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾದರು.
ಮಾನವೀಯ ನೆರವು, ಸಾಂತ್ವನ, ಅಂತ್ಯಸಂಸ್ಕಾರಕ್ಕೆ ಸಹಾಯ, ಮಲೆನಾಡು ಟುಡೆ, ಶಿವಮೊಗ್ಗ, Humanitarian aid, financial support, grieving family, Malenadu Today, Shivamogga#Humanity, #FinancialAid, #MalenaduToday, #ShivamoggaNews, #SocialWork, #HelpingHands
