ಹೊಳಲ್ಕೆರೆ: ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ; ರಸ್ತೆ ತಡೆದು ಪ್ರತಿಭಟನೆ.

ಹಂಚಿಕೊಳ್ಳಿ
WhatsApp Facebook X Telegram
Holalkere Gas Protest Public Blocks BH Road
Holalkere Gas Protest Public Blocks BH Road

ಹೊಳಲ್ಕೆರೆ: ಕಳೆದ ಒಂದು ತಿಂಗಳಿನಿಂದ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ತಾಲ್ಲೂಕಿನ ಬಿ.ಹೆಚ್. ರಸ್ತೆಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಇಂದು ಜರುಗಿದೆ.

ಕೇಂದ್ರದ ವಿರುದ್ಧ ಶಿವಮೊಗ್ಗದಲ್ಲಿ NSUI ಪ್ರತಿಭಟನೆ: 10 ಲಕ್ಷ ಉದ್ಯೋಗ ಭರ್ತಿಗೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ 

ನಗರದ ಇಂಡಿಯನ್ ಗ್ಯಾಸ್ ಏಜೆನ್ಸಿಯೊಂದರ ಮುಂದೆ ಜಮಾಯಿಸಿದ ನೂರಾರು ಗ್ರಾಹಕರು, ಏಜೆನ್ಸಿಯ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಷ್ಟೇ ಅಲ್ಲದೆ, ಪ್ರಮುಖ ಬಿ.ಹೆಚ್. ರಸ್ತೆಯನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಪ್ರಯಾಣಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುವಂತಾಯಿತು. 

ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ನಮಗೆ ಸಿಲಿಂಡರ್ ಸಿಗುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದರು. ಏಜೆನ್ಸಿಯ ಹಠಮಾರಿತನಕ್ಕೆ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದರು.

ಏಜೆನ್ಸಿಗಳ ನಡುವೆ ತಾರತಮ್ಯದ ಆರೋಪ:

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರೊಬ್ಬರು ಮಾತನಾಡಿ, ನಾವು ಒಂದು ತಿಂಗಳ ಹಿಂದೆಯೇ ಗ್ಯಾಸ್ ಬುಕ್ ಮಾಡಿದ್ದೇವೆ. ಆದರೆ ಈ ಇಂಡಿಯನ್ ಗ್ಯಾಸ್ ಏಜೆನ್ಸಿಯವರು ನಮಗೆ ಪೂರೈಕೆ ಮಾಡುತ್ತಿಲ್ಲ. ಆದರೆ ಇದೇ ಹೆಸರಿನ ಮತ್ತೊಂದು ಏಜೆನ್ಸಿಯವರು ಸರಿಯಾಗಿ ಪೂರೈಕೆ ಮಾಡುತ್ತಿದ್ದಾರೆ. ಅವರಿಗೆ ಸಾಧ್ಯವಾಗುವುದು ಇವರಿಗೆ ಏಕೆ ಸಾಧ್ಯವಾಗುತ್ತಿಲ್ಲ? ಈ ಬಗ್ಗೆ ಈ ಹಿಂದೆಯೇ ತಹಶೀಲ್ದಾರ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

Holalkere Gas Protest Public Blocks BH Road

Holalkere Gas Protest Public Blocks BH Road
Holalkere Gas Protest Public Blocks BH Road
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor