ಶಿವಮೊಗ್ಗ : ನಗರದ ಹೊರವಲಯದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಕೈದಿಗೆ ನೀಡಲು ತಂದಿದ್ದ ಬೇಕರಿ ತಿಂಡಿಯಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು, ಈ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಶಿವಮೊಗ್ಗದಲ್ಲಿ ಬಂಧನ
ಬಂಧಿತ ಆರೋಪಿಯನ್ನು ಭದ್ರಾವತಿಯ ವೀರಾಪುರ ನಿವಾಸಿ ಮೊಹಮ್ಮದ್ ಇಬ್ರಾಹಿಂ ಮೀರಾ ಎಂದು ಗುರುತಿಸಲಾಗಿದೆ. ಈತ ಜೈಲಿನಲ್ಲಿರುವ ಸೈಯದ್ ಸಮೀರ್ ಎಂಬ ಕೈದಿಯನ್ನು ಭೇಟಿ ಮಾಡಲು ಸಂದರ್ಶಕನಾಗಿ ಬಂದಿದ್ದ ಎಂದು ತಿಳಿದುಬಂದಿದೆ.
ಸಂದರ್ಶಕರ ಭೇಟಿ ವೇಳೆ ಕಾರಾಗೃಹದ ತಪಾಸಣಾ ಕೇಂದ್ರದ ಸಿಬ್ಬಂದಿ ಮೊಹಮ್ಮದ್ ಇಬ್ರಾಹಿಂ ತಂದಿದ್ದ ಚೀಲವನ್ನು ಪಾಸಣೆ ನಡೆಸಿದ್ದಾರೆ. ಈ ವೇಳೆ ಸೈಯದ್ ಸಮೀರ್‌ಗೆ ನೀಡಲು ತಂದಿದ್ದ ಚೌಚೌ ಪೊಟ್ಟಣದಲ್ಲಿ ಬಿಳಿ ಬಣ್ಣದ ಹರಳು ರೂಪದ ಅನುಮಾನಾಸ್ಪದ ಮಾದಕ ವಸ್ತು ಇರುವುದು ಪತ್ತೆಯಾಗಿದೆ.
ಜೈಲು ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಆರೋಪಿಯನ್ನು ಮಾದಕ ವಸ್ತು ಸಮೇತ ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Drugs Found in Snacks at Shivamogga Central Jail


