ಬಿಗಿ ಹೆಚ್ಚಿಸಿದ್ದ ಶಿವಮೊಗ್ಗ ಪೊಲೀಸ್! ಜಿಮ್​ಗಳಿಗೆ ಅಚ್ಚರಿ ವಿಸಿಟ್! ಏರಿಯಾಗಳಲ್ಲಿ ಬೀಟ್ ಮೀಟಿಂಗ್! ಏನಿದು!

ಹಂಚಿಕೊಳ್ಳಿ
WhatsApp Facebook X Telegram
Shivamogga CCTV Notice to Gyms and Police Beat Meetings with Public
Shivamogga CCTV Notice to Gyms and Police Beat Meetings with Public

Police Beat Meetings with Public / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವೀಕೆಂಡ್​ನಲ್ಲಿ ಬಿಗಿಯಾಗುತ್ತಿದ್ದ ಪೊಲೀಸ್ ಬೀಟ್​ಗಳು ಶಿವಮೊಗ್ಗದಲ್ಲೀಗ ವಾರದ ಆರಂಭದಲ್ಲಿಯೇ bಇಗಿಯಾಗಿದೆ. ಅದರಲ್ಲಿಯು ವಿಶೇಷವಾಗಿ ಮಹಿಳೆಯ ಸುರಕ್ಷತೆಯ ದೃಷ್ಟಿಯಿಂದ ಶಿವಮೊಗ್ಗ ಪೊಲೀಸರು ಹೊಸ ಡ್ರೈವ್ ಆರಂಭಿಸಿದ್ದಾರೆ.

ಇದಕ್ಕೆ ಪೂರಕವಾಗಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಜಿಮ್‌ಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಜಿಮ್‌ಗಳಿಗೆ ಆಗಮಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಖುದ್ದು ಮಹಿಳಾ ಅಧಿಕಾರಿಗಳು ಖಾತರಿ ಮಾಡಿಕೊಂಡಿದ್ದಾರೆ. ಜಿಮ್​ ಗೆ ಹೋಗುವ ಮಹಿಳೆಯರನ್ನು ಜಿಮ್​​ಗಳಲ್ಲಿಯೇ ಭೇಟಿಯಾಗಿ ವಿಚಾರಿಸಿದ ಪೊಲೀಸ್ ಅಧಿಕಾರಿಗಳು ಯಾವುದಾದರೂ ಸಮಸ್ಯೆಗಳು ಇವೆಯಾ ಎಂದು ಆಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಇದೇ ವೇಳೆ ಜಿಮ್​ನ ಮಾಲೀಕ ಹಾಗೂ ಸಿಬ್ಬಂದಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಷ್ಟೆ ಅಲ್ಲದೆ ಕರ್ನಾಟಕ ಪಬ್ಲಿಕ್ ಸೇಫ್ಟಿ ಕಾಯ್ದೆಯ ಅಡಿಯಲ್ಲಿ ಜಿಮ್ ಮಾಲೀಕರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕಾಯ್ದೆಯ ಇತರೆ ನಿಯಮಗಳನ್ನು ಪಾಲಿಸುತ್ತಿದ್ದಾರಾ ಎಂಬೆಲ್ಲಾ ವಿಷಯದಲ್ಲಿ ವಿವಿಧ ಜಿಮ್​ಗಳಲ್ಲಿ ತಪಾಸಣೆ ನಡೆಸಿದ್ದಾರೆ.

ಇನ್ನೂ ಇತ್ತ ದೊಡ್ಡಪೇಟೆಯಲ್ಲಿ ಪೊಲೀಸರು ಫೂಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಹೆಚ್ಚು ಮಾಡಿದ್ದಾರೆ. ವಿವಿಧ ಎರಿಯಾಗಳಿಗೆ ಖುದ್ದು ಇನ್​ಸ್ಪೆಕ್ಟರ್​ ತಮ್ಮ ಟೀಂ ಜೊತೆಗೆ ನಡೆದುಕೊಂಡು ಹೋಗಿ ಸರ್ಕಲ್​ಗಳಲ್ಲಿ ಜಮಾಯಿಸುವ ಗುಂಪಿನೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆಲವು ಕೇರಿಗಳ ನಿರ್ಧಿಷ್ಟ ಜಾಗದಲ್ಲಿ ಸೇರುವ ಮಹಿಳೆಯರು ಹಾಗೂ ಪುರಷರೊಂದಿಗೆ ಮಾತನಾಡಿ, ಏನಾದರೂ ಸಮಸ್ಯೆ ಇದೆಯಾ ಎಂದು ಪರಿಶೀಲಿಸಿದ್ದಾರೆ.

ಈ ಕಡೆ ಜಯನಗರ ಪೊಲೀಸ್ ಇನ್​ಸ್ಪೆಕ್ಟರ್ ರವಿಪಾಟೀಲ್​, ಎ.ಎ. ಕಾಲೋನಿ ನಿವಾಸಿಗಳೊಂದಿಗೆ ವಿಶೇಷ ಬೀಟ್ ಸಭೆ ನಡೆಸಿದ್ದಾರೆ ಮುಂಬರುವ ಈದ್ ಮಿಲಾದ್ ಹಾಗೂ ಗಣಪತಿ ಹಬ್ಬಗಳನ್ನು ಶಾಂತಿ ಮತ್ತು ಸಾಮರಸ್ಯದಿಂದ ಆಚರಿಸುವ ಕುರಿತು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor