ಹೊಸನಗರ : ನಾವು ಮಣ್ಣನ್ನೆಲ್ಲಾ ತೆಗೆದ್ವಿ, ಜೋರಾಗಿ ಕೂಗುದ್ವಿ, ಹುಡುಕುವ ಎಲ್ಲಾ ಪ್ರಯತ್ನಗಳನ್ನು ಮಾಡ್ವಿದ್ವಿ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.ಇವು ಏಪ್ರಿಲ್ 09ರ ರಾತ್ರಿ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯ ಹೇರ್‌ಪಿನ್ ತಿರುವಿನಲ್ಲಿ ಸಂಭವಿಸಿದ ಭೂಕುಸಿತದ ಮಣ್ಣಿನಡಿ ಸಿಲುಕಿ, ಪ್ರಾಣಾಪಾಯದಿಂದ ಪಾರಾಗಿ ಮೇಲೆ ಬಂದ ಕಾರ್ಮಿಕ ಅಶೋಕ್ ಅವರ ಕರುಣಾಜನಕ ಮಾತುಗಳು.
ಶಿವಮೊಗ್ಗ: ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾದ ಬಾಲಕಿ
ಕಾರ್ಮಿಕ ಅಶೋಕ್ ಅವರು ಧರೆ ಕುಸಿತದ ಆ ಭೀಕರ ಸಂದರ್ಭವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾವು ಅಲ್ಲಿ ಸಿಮೆಂಟ್ ಬೆಡ್ ಹಾಕುವ ಕೆಲಸ ಮಾಡುತ್ತಿದ್ದೆವು. ಕೆಲಸ ಮುಗಿಸಿ ಕೆಳಗಿನಿಂದ ಮೇಲೆ ನೋಡುವಷ್ಟರಲ್ಲಿ ಧರೆ ಅದಾಗಲೇ ಕುಸಿದು ಬಿದ್ದಿತ್ತು. ನಾವು ಬದಿಯಲ್ಲಿದ್ದ ಕಾರಣ ಹೇಗೋ ಒಂದು ಕಡೆಗೆ ಬಂದೆವು. ಆದರೂ ನಮ್ಮ ಕಾಲುಗಳು ಮಣ್ಣಿನಡಿ ಸಿಲುಕಿಕೊಂಡಿದ್ದವು. ಆದರೆ ನಮ್ಮ ಮಧ್ಯದಲ್ಲಿದ್ದವರ ಮೇಲೆ ಮಣ್ಣು ಬಿದ್ದು ಸಂಪೂರ್ಣವಾಗಿ ಮುಚ್ಚಿಹೋಗಿದ್ದರು. ನಾವು ಮಣ್ಣನ್ನು ಸರಿಸುವ ಪ್ರಯತ್ನ ಪಟ್ಟೆವು, ಜೀವ ಉಳಿಸಲು ಕಿರುಚಾಡಿದೆವು. ಆದರೆ ನಮ್ಮ ಕಣ್ಣೆದುರೇ ನಡೆದ ಆ ದುರಂತಕ್ಕೆ ನಾವೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಮತ್ತೊಬ್ಬ ಕಾರ್ಮಿಕ ಸಚಿನ್ ಮಾತನಾಡಿ, ಸಂಜೆ 6 ಗಂಟೆಗೆ ಕೆಲಸ ನಿಲ್ಲಿಸಿದ್ದೆವು. ಕೆಳಗಡೆ ಇದ್ದ ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕಿತ್ತು. ಬೆಡ್ ಹಾಕುತ್ತಿದ್ದ ನಾವಿಬ್ಬರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದೇವೆ. ಅಲ್ಲಿ ಒಟ್ಟು 7 ಜನರಿದ್ದೆವು. ನಾವು ಸೈಡ್‌ನಲ್ಲಿದ್ದ ಕಾರಣ ಬಚಾವಾದೆವು. ಮೇಲ್ಗಡೆ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದ ಕಾರಣ ಉಂಟಾದ ವೈಬ್ರೇಷನ್‌ಗೆ ಮಣ್ಣು ಕುಸಿದು ಇಷ್ಟೆಲ್ಲಾ ಅವಾಂತರವಾಯಿತು” ಎಂದು ಘಟನೆಯ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
Hulikal Ghat Landslide Survivors Heartbreaking Story


