ಪುರದಾಳು :  ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮರಾವನ್ನೇ ಕದ್ದ ಕಳ್ಳರು

This Article Written by / Prathapa thirthahalli / ಏಪ್ರಿಲ್ 1, 2026

Tiger Census

ಶಿವಮೊಗ್ಗ :  ತಾಲೂಕಿನ ಪುರದಾಳು ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅಳವಡಿಸಲಾಗಿದ್ದ ಕ್ಯಾಮರಾವನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಖಿಲ ಭಾರತ ರಾಷ್ಟ್ರೀಯ ಹುಲಿಗಣತಿ 2026ರ ಭಾಗವಾಗಿ ಈ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಏಪ್ರಿಲ್ 1 ರಿಂದ 25 ರವರೆಗೆ ನಡೆಯಲಿರುವ ಹುಲಿ ಗಣತಿ ಕಾರ್ಯಾಚರಣೆಗಾಗಿ ಅರಣ್ಯ ಇಲಾಖೆಯು ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಮೆಮೊರಿ ಕಾರ್ಡ್ ಸಹಿತ ಸೆನ್ಸರ್ ಕ್ಯಾಮರಾಗಳನ್ನು ಅಳವಡಿಸಿದೆ. ಪುರದಾಳು ಬ್ಯಾಕ್ ವಾಟರ್ ಬಳಿ ಅಳವಡಿಸಲಾಗಿದ್ದ ಕ್ಯಾಮರಾವನ್ನು ಕಳ್ಳರು ಹೊತ್ತೊಯ್ದಿದ್ದಾರೆ. 

ಮಾರ್ಚ್ 25 ರಂದು ಸಂಜೆ 4 ಗಂಟೆಯ ಸುಮಾರಿಗೆ ಬೀಟ್ ಫಾರೆಸ್ಟರ್ ಸ್ಥಳಕ್ಕೆ ಭೇಟಿ ನೀಡಿದಾಗ ಕ್ಯಾಮರಾ ಸುಸ್ಥಿತಿಯಲ್ಲಿತ್ತು. ಆದರೆ, ಮಾರ್ಚ್ 26 ರಂದು ಬೆಳಿಗ್ಗೆ 11 ಗಂಟೆಗೆ ಅವರು ಪುನಃ ಕರ್ತವ್ಯದ ಮೇಲೆ ಸ್ಥಳಕ್ಕೆ ಹೋದಾಗ ಕ್ಯಾಮರಾ ಕಳುವಾಗಿರುವುದು ಕಂಡುಬಂದಿದೆ.

ಸುಮಾರು 25,000 ರೂಪಾಯಿ ಮೌಲ್ಯದ ಈ ಕ್ಯಾಮರಾವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳ್ಳತನದ ನಂತರ ಅರಣ್ಯ ಸಿಬ್ಬಂದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲೆಡೆ ಹುಡುಕಾಡ ನಡೆಸಿದ್ದಾರೆ. ಆದರೆ ಕ್ಯಾಮರಾ ಪತ್ತೆಯಾಗದ ಕಾರಣ, ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. 

Tiger Census Camera Stolen Near Puradalu Dam

Tiger Census
Tiger Census
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Camera Theft,Puradalu Dam,Shivamogga Forest Department,Tiger Census 2026,Tunganagar Police Station,Wildlife Survey Camera

ಮುಂದಿನ ಸುದ್ದಿ ಒದಿ