ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್ ಅವರ ಜನ್ಮದಿನದ ಪ್ರಯುಕ್ತ ನಾಳೆ ಮಾರ್ಚ್ 22, 2026ರ ಭಾನುವಾರದಂದು ನಗರದಲ್ಲಿ ಅಭಿಮಾನಿಗಳು ಹಾಗೂ ಸ್ನೇಹಿತರ ಬಳಗದಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!
ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗಿನಿಂದಲೂ ತಮ್ಮದೇ ಆದ ವಿಶಿಷ್ಟ ಹಾಗೂ ಪಕ್ಷಾತೀತ ಸ್ನೇಹಿತರ ಬಳಗವನ್ನು ಹೊಂದಿರುವ ಎಂ ಶ್ರೀಕಾಂತ್ ಶಿವಮೊಗ್ಗದಲ್ಲಿ ಜನಮನದನಾಯಕ ಎನಿಸಿದ್ದಾರೆ. ಪ್ರತಿಯೊಬ್ಬರಿಗೂ ಸಹಾಯ ಮಾಡುವ ಶ್ರೀಕಾಂತ್ರವರ ಗುಣದ ಬಗ್ಗೆ ಶಿವಮೊಗ್ಗದಲ್ಲಿ ಹಲವು ಕಥೆಗಳೇ ಇವೆ. ಜನರಿಂದ ಅಣ್ಣಾ, ಅಯ್ಯಾ ಅಂತಾ ಕರೆಸಿಕೊಳ್ಳುವ ಶ್ರೀಕಾಂತ್ರವರು ಪ್ರಸ್ತುತ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಂಡಿದೆ.
Congress leader M Srikanth birthday
- ಶ್ರೀಕಾಂತ್ ಅಣ್ಣ ಸ್ನೇಹಿತರು ಹಾಗೂ ಗೆಳೆಯರ ಬಳಗದ ವತಿಯಿಂದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಇದರ ಜೊತೆಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಜನ್ಮದಿನವನ್ನು ಸಾರ್ಥಕಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
- ಇದೇ ವೇಳೆ ಎಂ. ಶ್ರೀಕಾಂತ್ ಅಭಿಮಾನಿ ಬಳಗದ ವತಿಯಿಂದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ಗಳಿಗೆ ಭೇಟಿ ನೀಡಿ, ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
- ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಧ್ಯಾಹ್ನ 12:30ಕ್ಕೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಂ. ಶ್ರೀಕಾಂತ್ ಅಭಿಮಾನಿ ಬಳಗ ಹಾಗೂ ಇಂಟಕ್ ಯುವ ಅಧ್ಯಕ್ಷರಾದ ಸಂತೋಷ್ ಆರ್. ಅವರ ನೇತೃತ್ವದಲ್ಲಿ ಆಶ್ರಮದ ಅಂಧ ಮಕ್ಕಳಿಗೆ ಬಟ್ಟೆ ವಿತರಣೆ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
- ಶಿವಮೊಗ್ಗ ಜಿಲ್ಲಾ ಕಾರ್ಮಿಕರ ಸೇವಾ ಸಂಘ (ರಿ) ಹಾಗೂ ಕಾರ್ಮಿಕ ಗೆಳೆಯರ ಬಳಗದ ವತಿಯಿಂದ ವಿ. ಪರಶುರಾಮ್ ಅವರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ ವಿತರಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಈ ಮೂಲಕ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ನಾಯಕರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಮತ್ತು ಕಾರ್ಮಿಕ ವರ್ಗವು ಮುಂದಾಗಿದೆ.ಹೀಗೆ ಹಲವು ಕಾರ್ಯಕ್ರಮಗಳು ನಾಳೆದಿನ ನಡೆಯಲಿದೆ.
ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.


