ಆನಂದಪುರ: ತೋಟಕ್ಕೆ ನೀರು ಹಾಯಿಸಲು ಹೋದಾಗ ಹಾವು ಕಚ್ಚಿ ರೈತ ಸಾವು

ಆನಂದಪುರ : ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗ್ರಾಮವೊಂದರಲ್ಲಿ ಹಾವಿನ ಕಡಿತಕ್ಕೆ ಸಿಲುಕಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮೃತರನ್ನು ಹುಚ್ಚಪ್ಪ ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಶಿವಮೊಗ್ಗ: ರೈಲ್ವೇ ಟಿಕೆಟ್​​ ಬುಕ್ಕಿಂಗ್​ ಕೌಂಟರ್ ಸೇರಿದಂತೆ ಹಲವೆಡೆ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದಿಂದ ತಪಾಸಣೆ

ಹುಚ್ಚಪ್ಪ ಅವರು ಮಾರ್ಚ್ 17ರ ರಾತ್ರಿ ಸುಮಾರು 8:30ರ ವೇಳೆಗೆ ತಮ್ಮ ತೋಟಕ್ಕೆ ನೀರು ಹಾಯಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಯಾವುದೋ ವಿಷಪೂರಿತ ಹಾವು ಅವರ ಎಡಗಾಲಿಗೆ ಕಚ್ಚಿದೆ. ತಕ್ಷಣ ಅವರು ಮನೆಗೆ ಮರಳಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬದವರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಕೂಡಲೇ ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:45ರ ಸುಮಾರಿಗೆ ಹುಚ್ಚಪ್ಪ ಅವರು ಕೊನೆಯುಸಿರೆಳೆದಿದ್ದಾರೆ.

Farmer Dies of Snake Bite in Anandapura, Sagara

Farmer Dies of Snake Bite in Anandapura, Sagar
Farmer Dies of Snake Bite in Anandapura, Sagar
Dandavati River  Kannada  Horoscope car decor new