ಶಿವಮೊಗ್ಗ : ರೈಲು ನಿಲ್ದಾಣದಲ್ಲಿ ಇಂದು ರೈಲ್ವೆ ಭದ್ರತಾ ಪಡೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ತಪಾಸಣೆ ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳ ಸೂಚನೆಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಯಿತು.
ಶಿವಮೊಗ್ಗ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ, ಮಹಿಳೆಯರ ಬೃಹತ್ ಪ್ರತಿಭಟನೆ
ಶಿವಮೊಗ್ಗ ರೈಲು ನಿಲ್ದಾಣದಾದ್ಯಂತ ಎಎಸ್‌ಸಿ (ASC) ಹಾಗೂ ಶ್ವಾನ ದಳದತಂಡಗಳು ತಪಾಸಣೆ ನಡೆಸಿದವು. ನಿಲ್ದಾಣದ ರೈಲ್ವೆ ಪ್ಲಾಟ್‌ಫಾರ್ಮ್‌ಗಳು, ಟಿಕೆಟ್ ಬುಕಿಂಗ್ ಕೌಂಟರ್‌ಗಳು, ಪಾರ್ಸೆಲ್ ಆಫೀಸ್, ವಾಹನ ನಿಲ್ದಾಣ ಹಾಗೂ ವೇಟಿಂಗ್ ಹಾಲ್‌ಗಳಲ್ಲಿ ಪ್ರತಿಯೊಂದು ಮೂಲೆಯನ್ನೂ ತಪಾಸಣೆಗೊಳಪಡಿಸಲಾಯಿತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
High Alert at Shivamogga Railway Station


Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.