ಸಾಗರ ಸರ್ಕಾರಿ ಸ್ಕೂಲ್ ಮೇಷ್ಟ್ರು ಅಮಾನತು! ಡಿಡಿಪಿಐ ಆದೇಶಕ್ಕೆ ಇತ್ತು ಮುಖ್ಯ ಕಾರಣ!

government school teacher / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಸಾಗರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದರ 7ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (ಡಿಡಿಪಿಐ) ಎಸ್.ಆರ್. ಮಂಜುನಾಥ್ ಅವರು ಈ ಆದೇಶ ಹೊರಡಿಸಿದ್ದಾರೆ.

Why was government school teacher Pramod Sannakki suspended by the Shivamogga DDPI after allegedly beating a class 7 student in Sagar taluk on March 12
Why was government school teacher Pramod Sannakki suspended by the Shivamogga DDPI after allegedly beating a class 7 student in Sagar taluk on March 12

ಶಿವಮೊಗ್ಗ ,ಸಾಗರದಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಗಮನಿಸಿ ಅಡಿಕೆ ರೇಟು!

ಏನಿದು ಪ್ರಕರಣ

ಮಾರ್ಚ್ 12ರಂದು ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿದ್ಯಾರ್ಥಿಗೆ ಹೊಡೆದಿದ್ದಾರೆ ಎನ್ನಲಾಗಿದ್ದು, ಇದರಿಂದ ಬಾಲಕನ ದೇಹದ ಮೇಲೆ ವಿವಿಧೆಡೆ ಗಾಯದ ಗುರುತು ಮೂಡಿವೆ. ಈ ಘಟನೆಯ ಕುರಿತು ಸಾಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸದಾನಂದ ಸ್ವಾಮಿ ಸಿ. ಅವರು ಪರಿಶೀಲನೆ ನಡೆಸಿ ಡಿಡಿಪಿಐ ಅವರಿಗೆ ವರದಿ ಸಲ್ಲಿಸಿದ್ದರು. ಜೊತೆಗೆ, ಶಿಕ್ಷಕನ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ ತಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದರು.

ಬಿಇಒ ಅವರ ವರದಿಯನ್ನು ಆಧರಿಸಿ, ಮಾರ್ಚ್ 13ರಂದು ಡಿಡಿಪಿಐ ಎಸ್.ಆರ್. ಮಂಜುನಾಥ್ ಅವರು ಶಿಕ್ಷಕನನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅನ್ವಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಈ ಕ್ರಮ ಕೈಗೊಳ್ಳಲಾಗಿದೆ. 

ಓರ್ವ ಸರ್ಕಾರಿ ನೌಕರನಾಗಿ ಈ ರೀತಿಯ ವರ್ತನೆಯು ಸಮರ್ಪಕವಾಗಿಲ್ಲ ಎಂದು ಅಧಿಕಾರಿಗಳು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗದಲ್ಲಿನ ಎಲ್ಲಾ ಟಾ್​ ಸುದ್ದಿಗಳು ಇ -ಪೇಪರ್​ನಲ್ಲಿ

Why was government school teacher Pramod Sannakki suspended by the Shivamogga DDPI after allegedly beating a class 7 student in Sagar taluk on March 12
Why was government school teacher Pramod Sannakki suspended by the Shivamogga DDPI after allegedly beating a class 7 student in Sagar taluk on March 12

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Why was government school teacher Pramod Sannakki suspended by the Shivamogga DDPI after allegedly beating a class 7 student in Sagar taluk on March 12
shivamogga car decor sun control house
shivamogga car decor sun control house