ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ! ಸಂತೋಷದ ಸುದ್ದಿ ಹೇಳಿದ ಶಿವಮೊಗ್ಗ ಸಂಸದ ಬಿವೈಆರ್​

ಹಂಚಿಕೊಳ್ಳಿ
WhatsApp Facebook X Telegram
Arecanut Crisis MP byr Demands Special Package
Arecanut Crisis MP byr Demands Special Package

ಶಿವಮೊಗ್ಗ/ ಮಲೆನಾಡು ಟುಡೆ ಸುದ್ದಿ/ ಕೆನರಾ ಬ್ಯಾಂಕ್ ಮೂಲಕ ನಡೆಸಲ್ಪಡುತ್ತಿರುವ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ ಯೋಜನೆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಮಹತ್ವದ ಅಪ್​ಡೇಟ್ ನೀಡಿದ್ದಾರೆ.  ದೇಶದಾದ್ಯಂತ ಅತ್ಯಂತ ಯಶಸ್ವಿಯಾಗಿರುವ ಈ ಯೋಜನೆ ಶಿವಮೊಗ್ಗದಲ್ಲಿ ವಿಶೇಷ ಯಶಸ್ಸು ಕಂಡಿದೆ ಅಂತಾ  ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಈ ಯೋಜನೆಯ ಪ್ರಗತಿಯ ಕುರಿತು ಪ್ರಶ್ನೆ ಎತ್ತಿದ್ದ ಸಂಸದರು, ಕೇಂದ್ರ ಸರ್ಕಾರದಿಂದ ಲಭ್ಯವಾದ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Shivamogga Self Employment Success  MP BY Raghavendra on Skill Development
Shivamogga Self Employment Success MP BY Raghavendra on Skill Development

ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಸೆರೆವಾಸ! ಮದುವೆಯಾಗಿದ್ದರೂ ತಪ್ಪಲ್ಲ ಶಿಕ್ಷೆ

Shivamogga Self Employment Success

  • ಸರ್ಕಾರದ ವರದಿಯ ಅನ್ವಯ, ದೀನದಯಾಳು ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ದೇಶದ 619 ಜಿಲ್ಲೆಗಳಲ್ಲಿ ಒಟ್ಟು 632 ಕೇಂದ್ರಗಳು ಯುವಕರಿಗೆ ಉದ್ಯಮಶೀಲತೆಯ ತರಬೇತಿ ನೀಡುತ್ತಿವೆ. 
  • ಈ ಯೋಜನೆಯಡಿ ತರಬೇತಿ ಪಡೆದ ಯುವಕರಿಗೆ ಕೇವಲ ಕೌಶಲ್ಯ ಮಾತ್ರವಲ್ಲದೆ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ನಿರಂತರ ಮಾರ್ಗದರ್ಶನ ನೀಡುವ ಮೂಲಕ ಅವರು ಸ್ವಂತ ಉದ್ಯಮ ಆರಂಭಿಸಲು ಬೆಂಬಲ ನೀಡಲಾಗುತ್ತಿದೆ.
  • ಕರ್ನಾಟಕ ರಾಜ್ಯವು ಈ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯದ 32 ಕೇಂದ್ರಗಳ ಮೂಲಕ ಕಳೆದ ಐದು ವರ್ಷಗಳಲ್ಲಿ 1,42,237 ಯುವಕರು ತರಬೇತಿ ಪಡೆದಿದ್ದಾರೆ. ವಿಶೇಷವೆಂದರೆ, ಇವರಲ್ಲಿ 1,11,371 ಮಂದಿ ಈಗಾಗಲೇ ಸ್ವಯಂ ಉದ್ಯೋಗದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. 

ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ!

ಶಿವಮೊಗ್ಗ ಜಿಲ್ಲೆಯಲ್ಲೂ ಈ ಯೋಜನೆಯು ಅದ್ಭುತ ಫಲಿತಾಂಶ ನೀಡಿದ್ದು, ಕಳೆದ ಐದು ವರ್ಷಗಳಲ್ಲಿ ತರಬೇತಿ ಪಡೆದ 4,840 ಯುವಕರಲ್ಲಿ 3,872 ಮಂದಿ ಸ್ವಂತ ಉದ್ಯಮ ಸ್ಥಾಪಿಸುವ ಮೂಲಕ ಶೇಕಡಾ 80 ರಷ್ಟು ಯಶಸ್ಸಿನ ಪ್ರಮಾಣ ದಾಖಲಾಗಿದೆ ಎಂದು ಸಂಸದರು ಹರ್ಷ ವ್ಯಕ್ತಪಡಿಸಿದ್ದಾರೆ. 

Shivamogga Self Employment Success MP BY Raghavendra on Skill Development
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor