ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ/ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಶಿವಮೊಗ್ಗದಲ್ಲಿ ಯೂತ್ ಬಾಕ್ಸಿಂಗ್ ಪಂದ್ಯಾವಳಿ ಹಮ್ಮಿಕೊಂಡಿದೆ.

ಮಾರ್ಚ್ 21 ಮತ್ತು 22 ರಂದು ರಾಜ್ಯಮಟ್ಟದ ಯೂತ್ ಬಾಕ್ಸಿಂಗ್ ಪಂದ್ಯಾವಳಿಯು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಂಘದ ಸಹ ಕಾರ್ಯದರ್ಶಿ ವಿನೋದ್ ಪಂದ್ಯಾವಳಿಯಲ್ಲಿ 2008-09 ರಲ್ಲಿ ಜನಿಸಿರುವ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ವಿವಿಧ ತೂಕದ ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ತಿಳಿಸಿದರು.
State Level Youth Boxing Championship
ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ!
ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾದ ಕಟ್ಟುನಿಟ್ಟಿನ ನಿಯಮಾವಳಿಗಳ ಅನ್ವಯ ಈ ಪಂದ್ಯಗಳು ನಡೆಯಲಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಅನುಭವಿ ತೀರ್ಪುಗಾರರು ಪಂದ್ಯಗಳ ಉಸ್ತುವಾರಿ ವಹಿಸಲಿದ್ದಾರೆ. ವಿಶೇಷವಾಗಿ ಜಿಲ್ಲೆಯಿಂದ ಒಬ್ಬರು ಮಹಿಳಾ ತೀರ್ಪುಗಾರರು ಈ ಕೂಟದಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹವಾಗಿದೆ.ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರದ ವತಿಯಿಂದ ಅನೇಕ ಸೌಲಭ್ಯಗಳು ದೊರೆಯಲಿದ್ದು, ಪ್ರಥಮ ಸ್ಥಾನ ಗಳಿಸಿದವರು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಅರ್ಹತೆ ಪಡೆಯಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಜಯಭೇರಿ ಬಾರಿಸಿದರೆ ಭಾರತೀಯ ಬಾಕ್ಸಿಂಗ್ ತಂಡಕ್ಕೆ ಆಯ್ಕೆಯಾಗುವ ಸುವರ್ಣ ಅವಕಾಶ ಕೂಡ ಇರಲಿದೆ.
ವಿನೋದ್, ಸಹ ಕಾರ್ಯದರ್ಶಿ
ಇನ್ನೂ ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 200 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಶಿವಮೊಗ್ಗ ಜಿಲ್ಲೆಯಿಂದಲೇ ವಿವಿಧ ವಿಭಾಗಗಳಲ್ಲಿ 12 ಮಂದಿ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಗರದ ಗಣ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಆಗಮಿಸಲಿದ್ದು, ಮುಖ್ಯ ತೀರ್ಪುಗಾರರಾಗಿ ಸಾಯಿಸತೀಶ್, ಕ್ಯಾಪ್ಟನ್ ಧನಸಂಜನ್, ಕ್ಯಾ.ಚಂದ್ರಶೇಖರ್ ಮತ್ತು ಮುಕುಂದ ಕಿಲಕರ್ ಭಾಗವಹಿಸಲಿದ್ದಾರೆ.
State Level Youth Boxing Championship in Shivamogga from March 21
