ಭೀಗ ಹಾಕಿದ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು! ಸೆಕ್ಯೂರಿಟಿ ಕೆಲಸ ಮುಗಿಸಿ ಬರುವಷ್ಟರಲ್ಲೆ 4 ಲಕ್ಷದ ಚಿನ್ನ ಮಾಯ

ಶಿವಮೊಗ್ಗ/  ಮಲೆನಾಡು ಟುಡೆ ಸುದ್ದಿ / ಇಲ್ಲಿನ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶ್ರೀರಾಮಪುರದಲ್ಲಿ ಕಳ್ಳತನ ಪ್ರಕರಣವೊಂದು ವರದಿಯಾಗಿದೆ. ಪೊಲೀಸ್​ ಎಫ್​ಐಆರ್ ಪ್ರಕಾರ, ಶ್ರೀರಾಮಪುರ ನಿವಾಸಿಯೊಬ್ಬರ ಮನೆಯಲ್ಲಿ ಹಗಲು ಹೊತ್ತಿನಲ್ಲೇ ಕಳ್ಳತನ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಆಗಿರುವ ನಿವಾಸಿಯೊಬ್ಬರ ಮನೆಗೆ ಹಿಂಬಾಗಿಲಿನಿಂದ ಒಳನುಗ್ಗಿದ್ದ ಕಳ್ಳರು ಕೃತ್ಯವೆಸಗಿದ್ದಾರೆ.

Major thjeft case in Shivamogga Srirampura 4.2 Lakh Worth Gold and Cash Stolen in tunga nagara police station
Major thjeft case in Shivamogga Srirampura 4.2 Lakh Worth Gold and Cash Stolen in tunga nagara police station

ರಾಜ್ಯ ಬಜೆಟ್​​, ಶಿವಮೊಗ್ಗ ಜಿಲ್ಲೆಗೆ  ಸಿಕ್ಕಿದ್ದೇನು

ಸಂಜೆ ಕೆಲಸ ಮುಗಿಸಿ ಬಂದ ಮಾಲೀಕರು ಹಿಂಬಾಗಿಲು ಓಪನ್ ಆಗಿರುವುದನ್ನು ಕಂಡು ಆಘಾತಗೊಂಡಿದ್ದಾರೆ. ಬಳಿಕ ಮನೆಯೊಳಗೆ ಹೋಗಿ ನೋಡಿದಾಗ ಅವರಿಗೆ ಕಳ್ಳತನವಾಗಿರುವುದು ಅರಿವಿಗೆ ಬಂದಿದೆ. ಕಳ್ಳರು ಹಾಲ್ ಪಕ್ಕದ ಕೋಣೆಯಲ್ಲಿದ್ದ ಕಬ್ಬಿಣದ ಬೀರುವನ್ನು ಒಡೆದು ಅದರಲ್ಲಿದ್ದ  ಸುಮಾರು   ಒಟ್ಟು 40 ಗ್ರಾಂ ತೂಕದ ಅಂದಾಜು 4,00,000/- ರೂಪಾಯಿ ಮೌಲ್ಯದ ಚಿನ್ನಾಭರಣಗಳ ಜೊತೆಗೆ ಬೀರುವಿನಲ್ಲಿದ್ದ 20,000/- ರೂಪಾಯಿಗಳ ನಗದು ಹಣವನ್ನೂ ಸಹ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ  ತುಂಗಾ ನಗರ ಪೊಲೀಸ್​ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

Major thjeft case in Shivamogga Srirampura 4.2 Lakh Worth Gold and Cash Stolen in tunga nagara police station

shivamogga car decor sun control house
shivamogga car decor sun control house