ಶಿವಮೊಗ್ಗ : ಅಪರಿಚಿತ ವ್ಯಕ್ತಿ ಅಸ್ವಸ್ಥತೆಯಿಂದ ಆಸ್ಪತ್ರೆಯಲ್ಲಿ ಸಾವು , ವಾರಸುದಾರರ ಪತ್ತೆ ಪೊಲೀಸರ ಮನವಿ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ರೈಲು ನಿಲ್ದಾಣದ ಆವರಣದಲ್ಲಿ ಅಸ್ವಸ್ಥತೆಯಿಂದ ಮಲಗಿದ್ದ ಸುಮಾರು 70 ವರ್ಷದ ಅಪರಿಚಿತ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮುಖಾಂತರ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಮೃತ ವ್ಯಕ್ತಿಯ ಹೆಸರು, ವಿಳಾಸ ಅಥವಾ ವಾರಸುದಾರರ ಬಗ್ಗೆ ಯಾವುದೇ ಸುಳಿವು ಇಲ್ಲದಿರುವುದರಿಂದ ಆತನ ಮಾಹಿತಿಗಾಗಿ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.  ಮೃತನು 5.4 ಅಡಿ ಎತ್ತರ, ದೃಢಕಾಯ ಶರೀರ, ಕಪ್ಪು ಮೈ ಬಣ್ಣ, ದುಂಡುಮುಖ, ತಲೆಯಲ್ಲಿ ಸುಮಾರು 03 ರಿಂದ 04 ಇಂಚು ಉದ್ದನೇಯ ಬಿಳಿ ಬಣ್ಣದ ತಲೆ ಕೂದಲು ,ಮುಖದ ಮೇಲೆ ಮತ್ತುಗಡ್ಡದ ಮೇಲೆ ಸುಮಾರು 1/2 ಇಂಚು ಬಿಳಿ ಕೂದಲು ಇರುತ್ತದೆ.ಮೃತನು ಉದ್ದ ತೋಳಿನ ಬಿಳಿ ಬಣ್ಣದ ಅದರಲ್ಲಿ ಸಣ್ಣ ನೀಲಿ ಚೌಕಾಕೃತಿ ಇರುವ ಶರ್ಟ್, ಬೂದು ಬಣ್ಣದ ಪ್ಯಾಂಟ್, ಕೆಂಪು ಬಿಳಿ ಕಪ್ಪು ಬಣ್ಣದ ಟವಲ್ ಧರಿಸಿರುತ್ತಾನೆ.

ಈ ಮೃತ ಗಂಡಸಿನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್‌ ಇನ್ ಸ್ಪೆಕ್ಟರ್, ದೂ.ಸಂ.: 08182-222974/9480802124 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor