ಶಿವಮೊಗ್ಗ : ನಾವು ಕೇಳ್ದಾಗ ಎಣ್ಣೆ ಕೊಡ್ಬೇಕು ಅಷ್ಟೇ ಇಲ್ದಿದ್ರೆ ಅಂಗಡಿಗೆ ಬೆಂಕಿ ಹಚ್ತೀನಿ ಎಂದು ವೈನ್​ ಸ್ಟೋರ್​​​ ಮಾಲೀಕನ ಮೇಲೆ ಹಲ್ಲೆ ?

ಹಂಚಿಕೊಳ್ಳಿ
WhatsApp Facebook X Telegram
Shivamogga Burglary ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗದ ಸಾಂದರ್ಭಿಕ ಚಿತ್ರ
Shivamogga Burglary

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ವೈನ್ ಸ್ಟೋರ್ ಒಂದಕ್ಕೆ ತೆರಳಿ ಮದ್ಯ ಪಡೆದುಕೊಂಡು, ಹಣ ಕೇಳಿದ ವೈನ್ ಸ್ಟೋರ್ ಮಾಲೀಕನ ಮೇಲೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಶಿವಮೊಗ್ಗದ ಗುಂಡಿಗುಡ್ಡೆ ರಸ್ತೆ ಬಳಿ ಇರುವ ವೈನ್ಸ್ ಸ್ಟೋರ್ ಒಂದಕ್ಕೆ ಇಬ್ಬರು ಆರೋಪಿಗಳು ತೆರಳಿ ಮಾಲೀಕರ ಬಳಿ ಮದ್ಯ ಕೊಡುವಂತೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ವೈನ್ಸ್ ಸ್ಟೋರ್ ಮಾಲೀಕರು ಹಣ ನೀಡಿದರೆ ಮಾತ್ರ ಮದ್ಯ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇಷ್ಟಕ್ಕೆ ಕೆರಳಿದ ಆರೋಪಿಗಳು ವೈನ್ಸ್ ಸ್ಟೋರ್ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಏನೋ, ನಾವು ಯಾರು ಗೊತ್ತಾ? ನಾವು ಕೇಳಿದಾಗ ಎಣ್ಣೆ ಕೊಡಬೇಕು, ಕೊಡದಿದ್ದರೆ ನಿನ್ನ ಅಂಗಡಿಗೆ ಬೆಂಕಿ ಹಚ್ಚುತ್ತೇವೆ ಎಂದು ಹೆದರಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂಭಾಗದ ಟೇಬಲ್ ಮೇಲಿದ್ದ ಗ್ಲಾಸ್ ಮತ್ತು ಫೋನ್‌ಪೇ ಸ್ಕ್ಯಾನರ್‌ನಿಂದ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದು, ವೈನ್ಸ್ ಸ್ಟೋರ್ ಮಾಲೀಕರಿಗೆ ಗಾಯ1ವಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ವೈನ್ಸ್ ಸ್ಟೋರ್ ಮಾಲೀಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor