ಶಿವಮೊಗ್ಗ: ಚಿನ್ನ ಕೇವಲ ಆಭರಣವಲ್ಲ, ಅದೊಂದು ಭದ್ರತೆ ಮತ್ತು ಪರಂಪರೆಯ ಸಂಕೇತ. ಆದರೆ, ಐಟಿ ದಾಳಿಯಂತಹ ಸುದ್ದಿಗಳು ಕೇಳಿಬಂದಾಗ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳುವುದು ಕಾನೂನುಬದ್ಧ ಎಂಬ ಆತಂಕ ಅನೇಕರನ್ನು ಕಾಡುತ್ತದೆ. ಆದರೆ, ಭಾರತೀಯ ಕಾನೂನು ನಮ್ಮ ಸಂಪ್ರದಾಯಗಳಿಗೆ ಪೂರಕವಾಗಿಯೇ ಇದೆ ಎಂಬುದು ಸಮಾಧಾನಕರ ವಿಷಯ.
ರಾಜ್ಯ ಬಜೆಟ್, ಶಿವಮೊಗ್ಗ ಜಿಲ್ಲೆಗೆ ಸಿಕ್ಕಿದ್ದೇನು
ಮಿತಿ ಎಷ್ಟು? ಸಿಬಿಡಿಟಿ (CBDT) ಮಾರ್ಗಸೂಚಿಗಳು ಇಲ್ಲಿವೆ
ಆದಾಯ ತೆರಿಗೆ ಇಲಾಖೆಯ 1994ರ ಸುತ್ತೋಲೆಯ ಪ್ರಕಾರ, ಐಟಿ ದಾಳಿಯ ಸಂದರ್ಭದಲ್ಲಿ ಈ ಕೆಳಗಿನ ಮಿತಿಯೊಳಗಿನ ಚಿನ್ನಾಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುವಂತಿಲ್ಲ:
ವಿವಾಹಿತ ಮಹಿಳೆ: 500 ಗ್ರಾಂ ವರೆಗೆ.
ಅವವಿವಾಹಿತ ಮಹಿಳೆ: 250 ಗ್ರಾಂ ವರೆಗೆ.
ಪುರುಷರು (ಪ್ರತಿ ಸದಸ್ಯರಿಗೆ): 100 ಗ್ರಾಂ ವರೆಗೆ.
ಈ ಮಿತಿಯೊಳಗಿನ ಚಿನ್ನಕ್ಕೆ ನೀವು ಬಿಲ್ ಅಥವಾ ದಾಖಲೆಗಳನ್ನು ಹೊಂದಿಲ್ಲದಿದ್ದರೂ ಸಹ ಅಧಿಕಾರಿಗಳು ಅದನ್ನು ಜಪ್ತಿ ಮಾಡುವುದಿಲ್ಲ.
Gold Ownership Limits ಮಿತಿ ಮೀರಿದ ಚಿನ್ನವಿದ್ದರೆ ಏನಾಗುತ್ತದೆ?
ಒಂದು ವೇಳೆ ನಿಮ್ಮ ಬಳಿ ನಿಗದಿಗಿಂತ ಹೆಚ್ಚಿನ ಚಿನ್ನವಿದ್ದರೆ, ಅದು ಆಟೋಮ್ಯಾಟಿಕ್ ಆಗಿ ಅಕ್ರಮವಾಗುವುದಿಲ್ಲ. ನೀವು ಆ ಚಿನ್ನವನ್ನು ಹೇಗೆ ಗಳಿಸಿದ್ದೀರಿ ಎಂಬುದಕ್ಕೆ ಸರಿಯಾದ ವಿವರಣೆ ನೀಡಬೇಕಾಗುತ್ತದೆ:
ಪರಂಪರೆ/ಉಡುಗೊರೆ: ತಲೆಮಾರುಗಳಿಂದ ಬಂದ ಆಸ್ತಿ ಅಥವಾ ವಿವಾಹದ ಸಮಯದಲ್ಲಿ ಬಂದ ಉಡುಗೊರೆ ಎಂದು ಸಾಬೀತುಪಡಿಸಬೇಕು.
ಆದಾಯದ ಮೂಲ: ನಿಮ್ಮ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ಆ ಚಿನ್ನವನ್ನು ಖರೀದಿಸಲಾಗಿದೆ ಎಂದು ತೋರಿಸಬೇಕು.
ದಾಖಲೆಗಳಿಲ್ಲದಿದ್ದರೆ ಅಥವಾ ವಿವರಿಸಲಾಗದ ಆದಾಯದಿಂದ ಚಿನ್ನ ಖರೀದಿಸಿದ್ದರೆ ಮಾತ್ರ ಅದು 78% ವರೆಗಿನ ಹೆಚ್ಚಿನ ತೆರಿಗೆಗೆ ಒಳಪಡಬಹುದು.
Gold Ownership Limits ಗಮನಿಸಬೇಕಾದ ಪ್ರಮುಖ ಅಂಶಗಳು
ಆಭರಣಗಳನ್ನು ವೈಯಕ್ತಿಕ ಬಳಕೆಯ ವಸ್ತುಗಳೆಂದು ಪರಿಗಣಿಸಲಾಗುತ್ತದೆ. ಆದರೆ ಚಿನ್ನದ ಬಿಸ್ಕೆಟ್ ಅಥವಾ ಕಾಯಿನ್‌ಗಳನ್ನು ಹೂಡಿಕೆ ಎಂದು ಪರಿಗಣಿಸುವುದರಿಂದ ಅವುಗಳ ಮೇಲೆ ಹೆಚ್ಚಿನ ನಿಗಾ ಇರುತ್ತದೆ.
ಬ್ಯಾಂಕ್ ಲಾಕರ್: ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವುದು ಭೌತಿಕ ಸುರಕ್ಷತೆಗಷ್ಟೇ ಹೊರತು, ಆದಾಯ ತೆರಿಗೆ ಇಲಾಖೆಯ ನಿಯಮಗಳು ಇಲ್ಲಿಯೂ ಅನ್ವಯಿಸುತ್ತವೆ.
ಮಾರಾಟದ ಮೇಲೆ ತೆರಿಗೆ: ಮನೆಯಲ್ಲಿ ಚಿನ್ನ ಇಟ್ಟುಕೊಳ್ಳಲು ಯಾವುದೇ ವಾರ್ಷಿಕ ತೆರಿಗೆ ಇಲ್ಲ. ಆದರೆ ಅದನ್ನು ಮಾರಾಟ ಮಾಡುವಾಗ ಮಾತ್ರ ‘ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್’ ಅನ್ವಯಿಸುತ್ತದೆ.

Gold Ownership Limits in India Income Tax Rules

