ಶಿವಮೊಗ್ಗ: ತುಪ್ಪೂರು ಬಳಿ ಅಪರಿಚಿತ ಶವ ಪತ್ತೆ; ವಾರಸುದಾರರ ಪತ್ತೆಗೆ ಪೊಲೀಸರ ಮನವಿ

ಶಿವಮೊಗ್ಗ | ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯ ತುಪ್ಪೂರು ಗ್ರಾಮದ ಅನೆಮರಿ ಕ್ರಾಸ್ ಬಳಿ ಅನಾಮದೇಯ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷ ವಯಸ್ಸಿನ ಈ ವ್ಯಕ್ತಿ ರಸ್ತೆ ಪಕ್ಕದಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. 

ಶಿವಮೊಗ್ಗ: ಬೈಕ್​ ಅಪಘಾತ ,ಬಿಟಿವಿ ವರದಿಗಾರ ಅನಿಲ್ ನಿಧನ

ಮೃತನ ಚಹರೆ ವಿವರ

ಮೃತ ವ್ಯಕ್ತಿಯು ದೃಢಕಾಯ ಮೈಕಟ್ಟು ಹೊಂದಿದ್ದು, ಎಣ್ಣೆಕಪ್ಪು ಮೈಬಣ್ಣ ಹಾಗೂ 5.6 ಅಡಿ ಎತ್ತರವಿದ್ದಾರೆ. ಎಡ ಪಕ್ಕೆಯಲ್ಲಿ ಸಾಸಿವೆ ಗಾತ್ರದ ಮಚ್ಚೆಯಿದೆ. ಮೃತದೇಹದ ಮೇಲೆ ನೀಲಿ ಬಣ್ಣದ ತುಂಬು ತೋಳಿನ ಟೀ ಶರ್ಟ್ ಹಾಗೂ ತಿಳಿ ಹಸಿರು ಬಣ್ಣದ ನೈಟ್ ಪ್ಯಾಂಟ್ ಇರುವುದು ಕಂಡುಬಂದಿದೆ.

ಈ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಅಥವಾ ಯಾವುದೇ ಪೊಲೀಸ್ ಠಾಣೆಯಲ್ಲಿ ಇಂತಹ ಚಹರೆಯುಳ್ಳ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದ್ದಲ್ಲಿ, ತಕ್ಷಣವೇ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕುಂಸಿ ಪೊಲೀಸರು ಮನವಿ ಮಾಡಿದ್ದಾರೆ.

ಪಿ.ಐ ಕುಂಸಿ ಠಾಣೆ: 9480803351, ಕುಂಸಿ ಪೊಲೀಸ್ ಠಾಣೆ: 8277982830,ಶಿವಮೊಗ್ಗ ಕಂಟ್ರೋಲ್ ರೂಂ: 08182 261413

Shivamogga Unknown Body Found Near Tuppur

Shivamogga Unknown Body Found Near Tuppur Hybrid Vegetable Seeds Shikaripura Laborer Dies Shivamogga Court Bhadravati Court Unidentified Man Soraba Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Shivamogga Unknown Body Found Near Tuppur
shivamogga car decor sun control house
shivamogga car decor sun control house